ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಈಗ ಸಖತ್ ಫೇಮಸ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಫಿಲಂ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.
ಪ್ರಸ್ತುತ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ರಿಲೀಸ್ ಆಗಿದ್ದು, ರಶ್ಮಿಕಾಗೆ ಜೋಡಿಯಾಗಿ ನಟ ಶರ್ವಾನಂದ್ ನಟಿಸಿದ್ದಾರೆ.
ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾದ ಶೂಟಿಂಗ್ ವೇಳೆ ಕಳೆದ ಕೆಲವು ಖುಷಿಖುಷಿಯ ಕ್ಷಣಗಳನ್ನು ಅವರೀಗ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ಹೇಗೆ ಹಿರಿಯ ಕಲಾವಿದರು, ಟೆಕ್ನೀಷಿಯನ್, ನಿರ್ದೇಶಕರ ಜತೆ ಸಂತೋಷದಿಂದ ಇರುವ ವಿಡಿಯೊವೊಂದು ಈಗ ಅಭಿಮಾನಿಗಳ ಮನ ಗೆದ್ದಿದೆ.
ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿಲ್ಲ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಸಿನಿಮಾವನ್ನು ತಿರುಮಲ ಕಿಶೋರ್ ನಿರ್ದೇಶನ ಮಾಡಿದ್ದು, ಎಸ್ಎಲ್ವಿ ಸಿನಿಮಾಸ್ ಸಂಸ್ಥೆ ಬಂಡವಾಳ ಹೂಡಿದೆ.