48 ಯೋಜನೆಗಳಿಗೆ 2,062.21 ಕೋಟಿ ರೂ. ಹೂಡಿಕೆ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅನುಮೋದನೆ

ಹೊಸದಿಗಂತ ವರದಿ, ಬೆಂಗಳೂರು:

ಕೈಗಾರಿಕಾ ಬೆಳವಣಿಗೆಗೆ ರಾಜ್ಯದಲ್ಲಿ ಇನ್ನಷ್ಟು ಉತ್ತೇಜನ ನೀಡುವ ಮೂಲಕ ಕರ್ನಾಟಕ ಸರ್ಕಾರ ಶನಿವಾರ 2,062.21 ಕೋಟಿ ರೂ. ಮೌಲ್ಯದ 48 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ 6,393 ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಯಾಗಲಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ಆರ್.ನಿರಾಣಿ ನೇತೃತ್ವದಲ್ಲಿ ನಡೆದ 130ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ (ಎಸ್‍ಎಲ್‍ಎಸ್‍ಡಬ್ಲ್ಯೂಸಿಸಿ) ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ.

ಸಮಿತಿಯು 50 ಕೋಟಿ ರೂ. ಗಿಂತ ಹೆಚ್ಚಿನ ಹೂಡಿಕೆಯೊಂದಿಗೆ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅನುಮೋದನೆ ನೀಡಿದೆ.

  • 1275.67 ಕೋಟಿ ರೂ. ಮೌಲ್ಯದ ಈ ಯೋಜನೆಗಳ ಮೂಲಕ ರಾಜ್ಯದಲ್ಲಿ 3,181 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ.
  • 15 ಕೋಟಿ ರೂ.ಗಿಂತ ಹೆಚ್ಚು ಮತ್ತು 50 ಕೋಟಿ ರೂ. ಗಿಂತ ಕಡಿಮೆ ಹೂಡಿಕೆಯ 40 ಹೊಸ ಯೋಜನೆಗಳಿಗೆ ಅನುಮೋದನೆ.
  • 724.87 ಕೋಟಿ ರೂ. ಮೌಲ್ಯದ ಈ ಯೋಜನೆಗಳಿಂದ ರಾಜ್ಯದ 3,212 ಜನರಿಗೆ ಉದ್ಯೋಗ.
  • 61.67 ಕೋಟಿ ರೂ. ಹೂಡಿಕೆಯ ಮತ್ತೊಂದು ಯೋಜನೆಗೆ ಅನುಮೋದನೆ ನೀಡಲಾಗಿದೆ.

ಒಟ್ಟು 2,062.21 ಕೋಟಿ ರೂ.ಗಳ ಹೂಡಿಕೆಯೊಂದಿಗೆ 6,393 ಜನರಿಗೆ ಉದ್ಯೋಗಾವಕಾಶವಿರುವ ಒಟ್ಟು 48 ಯೋಜನೆಗಳಿಗೆ ಅನುಮತಿ ನೀಡಲಾಗಿದೆ.

ಅನುಮೋದಿಸಲಾದ ಹೊಸ ಯೋಜನೆಗಳು

  • ರಾಕ್‍ಕೊಲಿನ್ ಇಂಡಿಯಾ ಎಂಟರ್‍ಪ್ರೈಸರ್ ಲಿ.(ರಾಯ್ತಾನ್ ಗ್ರೂಪ್) 253.75 ಕೋಟಿ ರೂ., 1306 ವ್ಯಕ್ತಿಗಳಿಗೆ ಉದ್ಯೋಗ.
  • ನಿತಿನ್ ಸಾಯಿ ಅಗ್ರೋಟೆಕ್ ಪ್ರೈವೇಟ್ ಲಿಮಿಟೆಡ್‍ನಿಂದ 231.82 ಕೋಟಿ ರೂ. ಮೊತ್ತದ ಯೋಜನೆ. ಇದರಿಂದ 965 ವ್ಯಕ್ತಿಗಳಿಗೆ ಉದ್ಯೋಗಾವಕಾಶ.
  • 85 ಜನರಿಗೆ ಉದ್ಯೋಗ ಸೃಷ್ಟಿಯೊಂದಿಗೆ ಒ/ ಕುಕ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನಿಂದ 75 ಕೋಟಿ ರೂ. ಯೋಜನೆ.
  • ಅಡೋಕ್ ಇನ್‍ಗ್ರಾಮ್ ಫಾರ್ಮ ಲಿಮಿಟೆಡ್‍ನಿಂದ 74.52 ಕೋಟಿ ರೂ. ಯೋಜನೆಯು 115 ಜನರಿಗೆ ಉದ್ಯೋಗ ಸೃಷ್ಟಿ
  • 84 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿರುವ ಸ್ಟರ್ಲಿಂಗ್ ಪ್ರೈವೇಟ್ ಲಿ.,ನಿಂದ 61.86 ಕೋಟಿ ರೂ. ಹೂಡಿಕೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಇವಿ ರಮಣ ರೆಡ್ಡಿ, ಆಯುಕ್ತೆ, ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ, ಎನ್ ಶಿವಶಂಕರ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿದೇರ್ಶಕ ದೊಡ್ಡಬಸವರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!