Wednesday, December 6, 2023

Latest Posts

ಆ ಚಿನ್ನಾರಿ ಡ್ಯಾನ್ಸ್ ಗೆ ನ್ಯಾಷನಲ್‌ ಕ್ರಷ್‌ ಫಿದಾ: ಅಡ್ರೆಸ್‌ ಹೇಳ್ತಿರಾ ಪ್ಲೀಸ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿ. ಈ ಚೆಲುವೆ ನಟಿಸಿದ ಪುಷ್ಪ ಚಿತ್ರದಲ್ಲಿನ ಶ್ರೀವಲ್ಲಿ ಪಾತ್ರ ಆಕೆಗೆ ಒಳ್ಳೆ ಕ್ರೇಜ್ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ರಶ್ಮಿಕಾ ಅಭಿನಯದ ‘ಸಾಮಿ.. ಸಾಮಿ’ಯ ಐಕಾನಿಕ್ ಸ್ಟೆಪ್ಸ್‌ಗೆ ವಿಶೇಷ ಫಾಲೋಯಿಂಗ್ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುಷ್ಪಾ ಚಿತ್ರದಲ್ಲಿ ರಶ್ಮಿಕಾ ಡಿಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದರೂ, ತಮ್ಮದೇ ಆದ ಅಭಿನಯ ಮತ್ತು ನೃತ್ಯದಿಂದ ಅಭಿಮಾನಿಗಳನ್ನು  ಆಕರ್ಷಿಸಿದರು. ʻಸಾಮಿʼ ಹಾಡು ಸಾಮಾಜಿಕ ಜಾಲತಾಣಗಳಲ್ಲೂ ಕೂಡಾ ಸಖತ್‌ ಫೇಮಸ್‌ ಆಗಿತ್ತು. ಈಗ ಈ ಹಾಡಿಗೆ ಚಬ್ಬಿ ಚಬ್ಬಿ-ಮುದ್ದು ಮುದ್ದು ಪುಟಾಣಿ ಹಾಕಿರುವ ಸ್ಟಪ್ಸ್‌ಗೆ ಜನರೇನು ರಶ್ಮಿಕಾನೇ ಫಿದಾ ಆಗಿದ್ದಾರೆ.

ಈ ವಿಡಿಯೋ ನೋಡಿದ ಪುಟಾಣಿ ಡ್ಯಾನ್ಸ್‌ಗೆ ನಾನೂ ಆಕರ್ಷಿತಳಾದೆ ಎಂದು ಬರೆದುಕೊಂಡಿದ್ದಾರೆ. ಆ ಹುಡುಗಿಯನ್ನು ಭೇಟಿಯಾಗಬೇಕು ಆದರೆ ಹೇಗೆ? ವಿಳಾಸ ಯಾರಿಗಾದರೂ ಗೊತ್ತಿದ್ದರೆ ಹೇಳಿ ಪ್ಲೀಸ್‌ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!