ಪ್ಯಾಂಟ್‌ ಹಾಕೋದನ್ನ ಮರೆತ್ರಾ..? ರಶ್ಮಿಕಾ ಮಂದಣ್ಣಾಗೆ ನೆಟ್ಟಿಗರ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸದ್ಯ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ರಶ್ಮಿಕಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ಮಾಡುವ ಮೂಲಕ ಸ್ಟಾರ್ ನಾಯಕಿಯಾಗಿ ಮುಂದುವರೆದಿದ್ದಾರೆ. ಪುಷ್ಪ ಚಿತ್ರದಿಂದ ಪ್ಯಾನ್‌ ಇಂಡಿಯಾ ಖ್ಯಾತಿ ಗಳಿಸಿದ ಈಕೆ ಸದ್ಯ ಗುಡ್ ಬೈ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಇಲ್ಲಿ ಸಿನಿಮಾ ಪ್ರಚಾರದ ಬದಲಾಗಿ ರಶ್ಮಿಕಾ ಹಾಕಿದ ಬಟ್ಟೆ ಮಾತ್ರ ಸಖತ್‌ ಟ್ರೋಲ್‌ ಆಗ್ತಿದೆ. ತಿಳಿ ಗುಲಾಬಿ ಬಣ್ಣದ ಚೆಕ್ ಗೌನ್ ಧರಿಸಿ ಪಡ್ಡಹುಡುಗರ ಮನ ಗೆದ್ದಿದ್ದಾಳೆ ಈ ಬ್ಯೂಟಿ. ರಶ್ಮಿಕಾ ಸೌಂದರ್ಯ ನೋಡಿ ಕೆಲವರು ಹುಚ್ಚೆದ್ದು ಕುಣಿಯುತ್ತಿದ್ದರೆ, ಇನ್ನು ಕೆಲವರು ಪ್ಯಾಂಟ್ ಹಾಕೋದು ಮರೆತ್ರಾ? ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!