ಬಿಗ್ ಬಾಸ್ ಮನೆಯ ಮೊದಲ ದಿನವೇ ಶುರುವಾಗಿದೆ ಮಾತಿನ ಚಕಮಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ ಮುಗಿದ ಬೆನ್ನಲ್ಲೇ ಟಿವಿ ಸೀಸನ್ ಆರಂಭಗೊಂಡಿದೆ. ನಿನ್ನೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​​ ಪ್ರಸಾರವಾಗುತ್ತಿದೆ. 18 ಮಂದಿ ಉತ್ಸಾಹದಲ್ಲಿ ದೊಡ್ಮನೆಗೆ ಎಂಟ್ರಿ ಪಡೆದಿದ್ದಾರೆ.

ಇತ್ತ ಪ್ರವೇಶ ಪಡೆದ ಮರುದಿನವೇ ಕೆಲ ಸ್ಪರ್ಧಿಗಳು ವಾದ ವಿವಾದಗಳನ್ನು ಶುರುಮಾಡಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ಇಂದಿನ ಶೋನ ಪ್ರೋಮೋ ರಿಲೀಸ್ ಮಾಡಿದ್ದು, ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕೆಲ ಸ್ಪರ್ಧಿಗಳು ವಾದ ವಿವಾದ ನಡೆಸಿರುವುದನ್ನು ಕಾಣಬಹುದು. ಕಳೆದ ಸೀಸನ್​ನಂತೆ ಪ್ರಶಾಂತ್​ ಸಂಬರಗಿ ಯಾವುದೋ ವಿಷಯಕ್ಕೆ ಜೋರಾಗಿ ಮಾತನಾಡಿದ್ದಾರೆ. ಆರ್ಯವರ್ಧನ್ ಗುರೂಜಿ, ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ ಅವರ ಸದ್ದು ಕೂಡ ಜೋರಾಗಿಯೇ ಕಂಡಿದೆ. ಈ ಮೂಲಕ ಎಂಟ್ರಿ ಪಡೆದ ಒಂದೇ ದಿನದಲ್ಲಿ ಮಾತಿನ ಚಕಮಕಿ ಶುರುವಾಗಿದೆ.

ನಿನ್ನೆ ಸಂಜೆ 6 ಗಂಟೆಗೆ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ನಟ, ನಿರೂಪಕ ಕಿಚ್ಚ ಸುದೀಪ್ ಒಟ್ಟು 18 ಜನರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ನೂರು ದಿನಗಳ ಬಿಗ್ ಬಾಸ್ ಕನ್ನಡ ಸೀಸನ್ 9 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಈ 9ನೇ ಸೀಸನ್‌ನ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆ 9 ಅನುಭವಿ ಸ್ಪರ್ಧಿಗಳೂ ಕಣದಲ್ಲಿರುತ್ತಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!