ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಹೈದರಾಬಾದ್‌ನವಳು ಎಂದು ಹಿಂದೊಮ್ಮೆ ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿದ್ದರು. ಇದರಿಂದಾಗಿ ರಶ್ಮಿಕಾ ಟ್ರೋಲ್‌ಗೆ ಸಿಕ್ಕುಹಾಕಿಕೊಂಡಿದ್ದರು. ಕೆಲವರು ಮಾತ್ರ ವಿಜಯ್ ದೇವರಕೊಂಡ ಊರು ಹೈದರಾಬಾದ್, ಅದೇ ಕಾಂಟೆಕ್ಸ್ಟ್‌ನಲ್ಲಿ ರಶ್ಮಿಕಾ ತಮ್ಮೂರು ಹೈದರಾಬಾದ್ ಎಂದು ಹೇಳಿಕೊಂಡಿದ್ದಾರೆ ಎಂದಿದ್ದರು. ಈ ಬಾರಿ ರಶ್ಮಿಕಾ ಟ್ರೋಲ್‌ಗೆ ಸಿಲುಕದಂತೆ ನಾನು ಕನ್ನಡತಿ ಎಂದು ಹೇಳಿಕೊಂಡಿದ್ದಾರೆ.
ಸಲ್ಮಾನ್ ಜೊತೆಗಿನ ಸಿಖಂದರ್ ಪ್ರಮೋಷನ್ಸ್ ವೇಳೆ ಎಷ್ಟೊಂದು ಭಾಷೆ ಹೇಗೆ ಮಾತನಾಡ್ತೀರಿ? ಹಿಂದಿ ಫ್ಲೂಯೆಂಟ್ ಆಗಿ ಬರುತ್ತದಾ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ರಶ್ಮಿಕಾ ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ ಸೋ ಕನ್ನಡ ಬರುತ್ತದೆ. ಇನ್ನು ಕೆಲಸ ಮಾಡಿದ್ದು ತೆಲುಗು ಇಂಡಸ್ಟ್ರಯಲ್ಲಿ, ಸದ್ಯ ನಾನಿರೋದು ಕೂಡ ಹೈದರಾಬಾದ್‌ನಲ್ಲಿ ಹಾಗಾಗಿ ತೆಲುಗು ಕಲಿತಿದ್ದೇನೆ ಎಂದಿದ್ದಾರೆ.
ಇನ್ನು ಬಾಲಿವುಡ್‌ಗೆ ಈಗ ಎಂಟ್ರಿ ಕೊಟ್ಟಿದ್ದೇನೆ. ಹಿಂದಿ ಬರುತ್ತದೆ ಆದರೆ ಪ್ರಾಪರ್ ಮುಂಬೈ ಜನದ ಜೊತೆ ಮಾತನಾಡೋಕೆ ಇನ್ನು ಕಾನ್ಫಿಡೆನ್ಸ್ ಇಲ್ಲ, ತಪ್ಪು ಮಾತಾಡ್ತಿನೇನೋ ಅಂತ ಯೋಚಿಸಿ ನಿಧಾನಕ್ಕೆ ಮಾತನಾಡ್ತೀನಿ ಎಂದು ರಶ್ಮಿಕಾ ಹೇಳಿದ್ದಾರೆ.
ಎಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಾ ಬಾಲಿವುಡ್ ರೀಚ್ ಆಗಿರುವ ರಶ್ಮಿಕಾ ಈಗಲೂ ಬೇರನ್ನು ಮರೆತಿಲ್ಲ ಎಂದು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.