ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಎಲ್ಲೂ ತಮ್ಮ ರಿಲೇಷನ್‌ಶಿಪ್‌ಗಳ ಬಗ್ಗೆ ಓಪನ್ ಆಗಿ ಮಾತನಾಡಿಲ್ಲ. ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಬ್ರೇಕ್ ಆದಾಗಲೂ, ಮೊದಲು ನಿಶ್ಚಿತಾರ್ಥ ಮುರಿದಿದ್ದು ಯಾರು ಎನ್ನುವ ಬಗ್ಗೆ ಈಗಲೂ ರಶ್ಮಿಕಾ ಮಾತನಾಡಿಲ್ಲ.
ಇದಾದ ಕೆಲ ದಿನಗಳ ನಂತರ ರಶ್ಮಿಕಾ ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆಗ ಕೂಡ ರಶ್ಮಿಕಾ ನಾವು ಡೇಟ್ ಮಾಡುತ್ತಿಲ್ಲ ಎಂದೇ ಹೇಳಿದ್ದರು. ಇದೀಗ ರಶ್ಮಿಕಾ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆ ಆಗುವಷ್ಟು ನಾನು ದೊಡ್ಡವಳಾಗಿಲ್ಲ, ಅದರ ಬಗ್ಗೆ ಆಲೋಚನೆ ಕೂಡ ಇಲ್ಲ. ಮದುವೆ ಆಗೋದು ಅಂತಾದರೆ ಆ ಹುಡುಗ ನನ್ನನ್ನು ಚೆನ್ನಾಗಿ ಕೇರ್ ಮಾಡ್ಬೇಕು, ಕಂಫರ್ಟಬಲ್ ಫೀಲ್ ಮಾಡಿಸಬೇಕು ಎಂದು ರಶ್ಮಿಕಾ ಹೇಳಿದ್ದಾರೆ.
ಇನ್ನು ಪರಸ್ಪರ ನಂಬಿಕೆ, ಗೌರವ ಇದ್ದಾಗ ಮಾತ್ರ ಪ್ರೀತಿ ಬದುಕೋಕೆ ಸಾಧ್ಯ, ಪ್ರೀತಿಯನ್ನು ವಿವರಿಸೋದು ಕೂಡ ಕಷ್ಟದ ಕೆಲಸ. ಆತ್ಮೀಯತೆಯಿಂದ ನನ್ನನ್ನು ಕಾಣುವ, ಯಾವತ್ತೂ ಒನ್ ಸೈಡೆಡ್ ಲವ್ ಎನಿಸದೇ ಇರುವ ಹುಡುಗ ಸಿಕ್ಕಾಗ ಮದುವೆ ಆಗುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.