CINE | ಬ್ಯುಸಿಯಾಗಿದ್ದರೂ ಅಸಿಸ್ಟೆಂಟ್ ಮದುವೆಗೆ ಬಂದ ರಶ್ಮಿಕಾ, ನ್ಯಾಷನಲ್ ಕ್ರಶ್‌ನ್ನು ಹೊಗಳಿದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಎಷ್ಟೇ ಎತ್ತರಕ್ಕೆ ಬೆಳೆದರೂ ಅವರ ಕಾಲೆಳೆಯುವವರ ಸಂಖ್ಯೆ ಎಂದಿಗೂ ಕಡಿಮೆಯಾಗುವುದಿಲ್ಲ. ಆದರೆ ಈ ಬಾರಿ ನೆಟ್ಟಿಗರು ರಶ್ಮಿಕಾರನ್ನು ಹಾಡಿ ಹೊಗಳಿದ್ದಾರೆ.

ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಶ್ಮಿಕಾ, ತಮ್ಮ ಸ್ಕೆಡ್ಯೂಲ್‌ನಲ್ಲಿ ಬಿಡುವು ಮಾಡಿಕೊಂಡು ಅಸಿಸ್ಟೆಂಟ್ ಸಾಯಿ ಅವರ ಮದುವೆಗೆ ಹಾಜರಾಗಿದ್ದಾರೆ.

ಸಾಯಿ ಅವರಿಗೋಸ್ಕರ ಬಿಡುವು ಮಾಡಿಕೊಂಡು ರಶ್ಮಿಕಾ ಮದುವೆಗೆ ಬಂದಿದ್ದು, ನವದಂಪತಿ ಖುಷಿಯಲ್ಲಿ ರಶ್ಮಿಕಾ ಕಾಲಿಗೆ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಕಾಲಿಗೆ ಯಾರೋ ಬಿದ್ದಂತೆ ರಶ್ಮಿಕಾ ಭಯಪಟ್ಟು, ಗಾಬರಿಯಾಗಿದ್ದಾರೆ. ರಶ್ಮಿಕಾ ಎಕ್ಸ್‌ಪ್ರೆಶನ್ಸ್ ಕ್ಯೂಟ್, ಮುಗ್ಧೆ ಎಂದೆಲ್ಲಾ ಕಮೆಂಟ್ ಬರುತ್ತಿದ್ದು, ವಿಡಿಯೋ ವೈರಲ್ ಆಗಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!