ಜಿ20 ಶೃಂಗಸಭೆ: ಎರಡು ದಿನಗಳ ಕಾಲ ಹಲವು ಮೆಟ್ರೋ ನಿಲ್ದಾಣಗಳು ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಜಿ-20 ಶೃಂಗಸಭೆ ನಡೆಯಲಿದೆ. ವಿವಿಧ ರಾಷ್ಟ್ರಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಹೀಗಾಗಿ ಎರಡು ದಿನಗಳ ಕಾಲ ದೆಹಲಿ ಮೆಟ್ರೋದ ಹಲವು ನಿಲ್ದಾಣಗಳ ಗೇಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ.

ಭದ್ರತೆಯ ದೃಷ್ಟಿಯಿಂದ ದೆಹಲಿ ಟ್ರಾಫಿಕ್ ಪೊಲೀಸರು ಈ ಕ್ರಮ ತೆಗೆದುಕೊಳ್ಳಲಿದ್ದು, ಅನೇಕ ಮೆಟ್ರೋ ನಿಲ್ದಾಣಗಳ ಗೇಟ್‌ಗಳನ್ನು ಸೆಪ್ಟೆಂಬರ್ 8 ರಿಂದ 10ರ ವರೆಗೆ ಮುಚ್ಚಲಾಗುತ್ತದೆ.

ದೆಹಲಿ ಪೊಲೀಸರ ಮೆಟ್ರೋ ಘಟಕದ ಸಲಹೆಯ ಮೇರೆಗೆ ವಿವಿಐಪಿ ಮಾರ್ಗದ ಕಡೆಗೆ ತೆರೆಯುವ ಮೆಟ್ರೋ ನಿಲ್ದಾಣಗಳ ಗೇಟ್‌ಗಳನ್ನು ಸೆಪ್ಟೆಂಬರ್ 8 ರಿಂದ 10 ರವರೆಗೆ ಬಂದ್‌ ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!