February 27, 2026
Friday, February 27, 2026
spot_img

CINE | ರಶ್ಮಿಕಾ ಚಾರ್ಮ್‌ಗೆ ಸಾಟಿಯೇ ಇಲ್ಲ, ಮಿಸರ್ಸ್‌ ದೇವರಕೊಂಡ ಕೈಯಲ್ಲಿದೆ ಬರೋಬ್ಬರಿ 12 ಸಿನಿಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇದೀಗ ಮಿಸರ್ಸ್‌ ದೇವರಕೊಂಡ ಆಗಿದ್ದಾರೆ. ಮದುವೆಯಾದ ನಂತರ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಸಿಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ಮಾತನ್ನು ರಶ್ಮಿಕಾ ಸುಳ್ಳು ಮಾಡಿದ್ದಾರೆ.

ನಟಿ ರಶ್ಮಿಕಾ ಕೈಯಲ್ಲಿ ಇನ್ನೂ ಹನ್ನೆರಡು ಸಿನಿಮಾಗಳಿವೆ. ಹೌದು, 12 ಪ್ರಾಜೆಕ್ಟ್​ಗಳನ್ನು ಹೊಂದಿರುವ ರಶ್ಮಿಕಾ ಕೆಲವೇ ದಿನಗಳಲ್ಲಿ ನೂರು ಕೋಟಿಯ ಒಡತಿಯಾಗಲಿದ್ದಾರೆ. ಯಾವೆಲ್ಲಾ ಸಿನಿಮಾಗಳಿವೆ ನೋಡಿ..

ಹೋಮಿ ಅದಜಾನಿಯಾ ನಿರ್ದೇಶನದ ಕಾಕ್‌ಟೇಲ್‌ 2ನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಶಾಹಿದ್‌ ಕಪೂರ್‌ ಕ್ರಿತಿ ಸೆನೊನ್‌ ಕೂಡ ಸಿನಿಮಾದಲ್ಲಿದ್ದಾರೆ. ಇನ್ನು ವಿಜಯ್‌ ದೇವರಕೊಂಡ ಜೊತೆ ರಣಬಾಲಿ ಸಿನಿಮಾದಲ್ಲಿ ನಟಿಸಲಿದ್ದಾರೆ. ರಶ್ಮಿಕಾಗೆ ಸಿಕ್ಕಾಪಟ್ಟೆ ಫೇಮ್‌ ತಂದುಕೊಟ್ಟ ಪುಷ್ಪ 3: ದಿ ರಾಂಪೇಜ್‌ನಲ್ಲಿ ಕೂಡ ಶ್ರೀವಲ್ಲಿ ಇದ್ದಾರೆ.

ಅಟ್ಲೀ ನಿರ್ದೇಶನದ AA22xA6 ಸಿನಿಮಾದಲ್ಲಿಯೂ ರಶ್ಮಿಕಾ ನಟಿಸಿದ್ದಾರೆ. ಇದರಲ್ಲಿ ರಶ್ಮಿಕಾದ್ದು ನೆಗೆಟಿವ್‌ ಕ್ಯಾರೆಕ್ಟರ್‌ ಆಗಲಿದೆ.ಬ್ಲಾಕ್​ಬಸ್ಟರ್ ಅನಿಮಲ್ ಚಿತ್ರದ ಮುಂದುವರಿದ ಭಾಗವಾದ ‘ಅನಿಮಲ್ ಪಾರ್ಕ್’ ಸಿನಿಮಾ ಕೂಡಾ ನಟಿಯ ಕೈಯಲ್ಲಿದೆ. ನಟಿಯ ಮುಂಬರುವ ಸಿನಿಮಾಗಳ ಪೈಕಿ ‘ಮೈಸಾ’ ಎಂಬ ರಾ ಆ್ಯಕ್ಷನ್​​ ಥ್ರಿಲ್ಲರ್ ಇದ್ದು, ಇದರಲ್ಲವರು ಉಗ್ರ ಬುಡಕಟ್ಟು ಮಹಿಳೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆರ್​ಆರ್​ಆರ್​ ಸ್ಟಾರ್​ ರಾಮ್ ಚರಣ್ ಜೊತೆ ಬಹುನಿರೀಕ್ಷಿತ ‘ಆರ್‌ಸಿ 17’ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್ ಬಸು ಅವರೊಂದಿಗಿನ ಯೋಜನೆಯಲ್ಲಿ ನಟಿ ಕೈ ಜೋಡಿಸಿದ್ದಾರೆ.ಶ್ಮಿಕಾ ‘ಏಕ್ ಸಾಥ್ ದೋ ದೋ’ ಶೀರ್ಷಿಕೆಯ ಚಿತ್ರದಲ್ಲೂ ನಟಿಸಿದ್ದಾರೆ. ಆದಾಗ್ಯೂ, ಬಹಳ ಸಮಯದಿಂದ ಈ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಬಂದಿಲ್ಲ.ಕೆ.ಎಸ್ ನಿರ್ದೇಶನದ ತೆಲುಗು ಬಯೋಪಿಕ್ ಸ್ಟುವರ್ಟ್‌ಪುರಂ ಡೊಂಗಾದಲ್ಲಿ ಸಾಯಿ ಶ್ರೀನಿವಾಸ್ ಬೆಲ್ಲಂಕೊಂಡ ಅವರೊಂದಿಗೆ ರಶ್ಮಿಕಾ ನಟಿಸುವುದಾಗಿ ಘೋಷಿಸಲಾಗಿದೆ.ಇದಲ್ಲದೇ, ಅವರು ರೈನ್‌ಬೋ ಚಿತ್ರವನ್ನು ಸಹ ನಿರ್ವಹಿಸುತ್ತಿದ್ದಾರೆ. ತೆಲುಗು-ತಮಿಳು ದ್ವಿಭಾಷಾ ಫ್ಯಾಂಟಸಿ ರೊಮ್ಯಾಂಟಿಕ್​ ಡ್ರಾಮಾ ಈಗಾಗಲೇ ನಿರ್ಮಾಣ ಹಂತದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !