ಇಂದು ‘ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023’ ಪ್ರದಾನ ಮಾಡಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದು ಕೇಂದ್ರ ಜಲಶಕ್ತಿ ಸಚಿವಾಲಯವು ಸ್ವಚ್ಛ ಸೃಜಲ್ ಶಕ್ತಿ ಸಮ್ಮಾನ್ 2023ನ್ನು ಆಯೋಜಿಸಿದ್ದು, ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನೀಡಿ ಗೌರವಿಸಲಿದ್ದಾರೆ.

ರಾಷ್ಟ್ರಪತಿ ಸಚಿವಾಲಯದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಅಸಾಧಾರಣ ಕೊಡುಗೆ ನೀಡಿದ ಮಹಿಳೆಯರಿಗೆ ಗೌರವಿಸಲಾಗುತ್ತದೆ. ಒಟ್ಟಾರೆ 18 ಸಾಧಕರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ನೀಡಲಿದದಾರೆ.

ಜತೆಗೆ ಜಲಶಕ್ತಿ ಅಭಿಯಾನ, ಮಳೆನೀರು ಸಂಗ್ರಹಿಸಿ ಅಭಿಯಾನ, ಜಲ ಶಕ್ತಿ ಸೆ ನಾರಿ ಶಕ್ತಿ ಕುರಿತ ವಿಡಿಯೋ ಮತ್ತು ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!