Tuesday, February 27, 2024

ʻವಸುಧೈವ ಕುಟುಂಬಕಂʼ ಆಶಯದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಕ್ಷಿಯಾದ ರಾಷ್ಟ್ರೋತ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ರಾಷ್ಟ್ರೋತ್ಥಾನವು ಸಂಭ್ರಮೋಲ್ಲಾಸಗಳಿಂದ ಆಚರಿಸಿತು. ರಾಷ್ಟ್ರೋತ್ಥಾನದ 23 ಯೋಗ ಕೇಂದ್ರಗಳು, ರಾಜ್ಯಾದ್ಯಂತ ಇರುವ 11 ಸಿಬಿಎಸ್‍ಇ ಶಾಲೆಗಳು, 18 ರಾಜ್ಯ ಪಠ್ಯಕ್ರಮ ಶಾಲೆಗಳು, ತಪಸ್-ಸಾಧನಾ ಯೋಜನೆ ಹಾಗೂ ಇನ್ನಿತರೇ ಪ್ರಕಲ್ಪಗಳಲ್ಲಿ ಈ ಬಾರಿಯ ಯೋಗ ದಿನಾಚರಣೆಯನ್ನು ವಸುಧೈವ ಕುಟುಂಬಕಂ ಎಂಬ  ಆಶಯದೊಂದಿಗೆ ಆಯೋಜಿಸಲಾಯಿತು.

ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಹಾಗೂ ಶ್ರೀ ರಾಜೇಶ್ ಪದ್ಮಾರ್, ಆರ್‍.ಎಸ್.ಎಸ್.ನ ಪ್ರಾಂತ ಪ್ರಚಾರ ಪ್ರಮುಖ್, ಕರ್ನಾಟಕ ದಕ್ಷಿಣ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಜಯನಗರ ಶಾಸಕರಾದ ಶ್ರೀ ಸಿ. ಕೆ. ರಾಮಮೂರ್ತಿ, ಆರ್‌.ಎಸ್‍.ಎಸ್‍.ನ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ. ತಿಪ್ಪೇಸ್ವಾಮಿ, ಮೊದಲಾದ ಗಣ್ಯರೂ ಉಪಸ್ಥಿತರಿದ್ದರು.

ಶ್ರೀ ದಿನೇಶ್ ಹೆಗ್ಡೆಯವರು ರಾಷ್ಟ್ರೋತ್ಥಾನ ಪರಿಷತ್‍ನ ಸಮಾಜಸೇವಾ ಯೋಜನೆಗಳು ಹಾಗೂ ಅವು ಸಮಾಜದಲ್ಲಿ ಉಂಟುಮಾಡಿರುವ ಪ್ರಭಾವದ ಬಗೆಗೆ ಹೇಳಿದರು.

ಶ್ರೀ ರಾಜೇಶ್ ಪದ್ಮಾರ್ ಅವರು ಈ ಬಾರಿಯ ಯೋಗ ದಿನಾಚರಣೆಯ ಆಶಯ, ಸಂದೇಶ, ವಸುಧೈವ ಕುಟುಂಬಕಂ ಮನೆ-ಮನಗಳಲ್ಲಿ ಸ್ಥಾಪಿತವಾದರೆ ವಿಶ್ವಭ್ರಾತೃತ್ವವನ್ನು ಜಾಗೃತಗೊಳಿಸಿ, ಸಾಮರಸ್ಯ ಸಾಧಿಸಿ, ವಿಶ್ವದೆಲ್ಲೆಡೆ ಸಹಬಾಳ್ವೆಯ ಜೀವನವನ್ನು ಹೇಗೆ ನಮ್ಮದಾಗಿಸಿಕೊಳ್ಳಬಹುದು ಎಂದು ತಿಳಿಸಿದರು. ಅದಕ್ಕೆ ಯಮ, ನಿಯಮ, ಆಸನ, ಪ್ರಾಣಾಯಾಮ ಮೊದಲಾದ ಅಷ್ಟಾಂಗಯೋಗಗಳು ಹೇಗೆ ಸಹಕಾರಿಯಾಗಬಹುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!