ರವಿ ಬಿಷ್ಣೋಯ್​ ಬೌಲಿಂಗ್ ಮೋಡಿ: ಭಾರತದ ಗೆಲುವಿಗೆ 158 ಟಾರ್ಗೆಟ್ ನೀಡಿದ ವೆಸ್ಟ್​ ಇಂಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ವಿರುದ್ಧ ವೆಸ್ಟ್​ ಇಂಡೀಸ್ 157 ರನ್ ಗಳಿಸುವಲ್ಲಿ ಶಕ್ತವಾಗಿದೆ.
3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿ, ಯುವ ಬೌಲರ್​ ರವಿ ಬಿಷ್ಣೋಯ್ ಸೇರಿದಂತೆ ಬೌಲರ್​ಗಳ ಅದ್ಭುತ ಪ್ರದರ್ಶನ​ದಿಂದ ವೆಸ್ಟ್​ ಇಂಡೀಸ್ ತಂಡವನ್ನು 157 ರನ್​ಗಳಿಗೆ ​​ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ರವಿ ಬಿಷ್ಣೋಯ್​ ಒಂದೇ ಓವರ್​ನಲ್ಲಿ ರಾಸ್ಟನ್​ ಚೇಸ್​(4) ಮತ್ತು ರೊವ್ಮನ್ ಪೊವೆಲ್(2) ವಿಕೆಟ್​ ಪಡೆದರು.
ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದ ವಿಂಡೀಸ್​ಗೆ ನಾಯಕ ಪೊಲಾರ್ಡ್​ ಮತ್ತು ಉಪನಾಯಕ ಪೂರನ್​ 6ನೇ ವಿಕೆಟ್​ಗೆ 45 ರನ್​ ಸೇರಿಸಿ ಚೇತರಿಕೆ ನೀಡಿದರು. ಪೂರನ್​ 43 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು 4 ಬೌಂಡರಿ ಸಹಿತ 61 ರನ್​ಗಳಿಸಿದರೆ, ಪೊಲಾರ್ಡ್​ 19 ಎಸತಗಳಲ್ಲಿ ಅಜೇಯ 24 ರನ್​ಗಳಿಸಿ 158 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಭಾರತದ ಪರ ರವಿ ಬಿಷ್ಣೋಯ್​ 4 ಓವರ್​ಗಳಲ್ಲಿ 17 ರನ್​ ನೀಡಿ 2 ವಿಕೆಟ್ ಪಡೆದೆ, ಹರ್ಷಲ್ ಪಟೇಲ್ 37ಕ್ಕೆ 2 ವಿಕೆಟ್ ಪಡೆದರು, ಉಳಿದಂತೆ ಭುವನೇಶ್ವರ್​ 31ಕ್ಕೆ1, ದೀಪಕ್​ ಚಾಹರ್​ 28ಕ್ಕೆ1, ಚಹಲ್ 34ಕ್ಕೆ 1 ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!