ಪೊಲೀಸ್ ಗೌರವದೊಂದಿಗೆ ನಾಡೋಜ ಚೆನ್ನವೀರ ಕಣವಿ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ನಿಧನರಾದ ಹಿರಿಯ ಸಾಹಿತಿ , ನಾಡೋಜ ಚೆನ್ನವೀರ ಕಣವಿ (93) ಅವರ ಅಂತ್ಯಕ್ರಿಯೆಯನ್ನು ಧಾರವಾಡದ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್​ನಲ್ಲಿ ನಡೆಸಲಾಯಿತು.
ಪೊಲೀಸ್ ಗೌರವದೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಪುತ್ರ ಶಿವಾನಂದ ಕಣವಿ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿದ್ದು, ಪತ್ನಿ ಶಾಂತಾದೇವಿ ಸಮಾಧಿ ಪಕ್ಕದಲ್ಲೇ ಕಣವಿ ಅಂತ್ಯಕ್ರಿಯೆ ಮಾಡಲಾಗಿದೆ.
ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಹಾಲಪ್ಪ ಆಚಾರ್​, ಶಾಸಕ ಅರವಿಂದ ಬೆಲ್ಲರ್ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!