ಹೊಸ ದಾಖಲೆ ಬರೆದ ಹಸಿ ಕೊಕ್ಕೋ: ಮಾರುಕಟ್ಟೆಯಲ್ಲಿ ಭಾರೀ ಏರಿಕೆ ದಾಖಲಿಸಿದ ಧಾರಣೆ

ಹೊಸ ದಿಗಂತ ಮಂಗಳೂರು:

ಹೊಸ ಅಡಿಕೆಯ ಬೆನ್ನಿಗೇ ಈಗ ಹಸಿ ಕೊಕ್ಕೋ ಧಾರಣೆ ಕೂಡಾ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು, ಕರಾವಳಿ ಭಾಗದ ಬೆಳೆಗಾರನ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ. ಹಸಿ ಕೊಕ್ಕೋ ಧಾರಣೆ 200 ರೂ.ಗಳನ್ನು ದಾಟಿದ್ದು, ಇದು ಹೊಸ ದಾಖಲೆ ಬರೆದಿದೆ. ಇದುವರೆಗೆ ಧಾರಣೆ 125 ರೂ. ದಾಟಿದ ಉದಾಹರಣೆಗಳಿಲ್ಲ.

ವಿಶ್ವದಲ್ಲಿ ಕೊಕ್ಕೋ ಬೀಜಗಳಿಗೆ ಬೇಡಿಕೆ ವ್ಯಾಪಕವಾಗಿ ಹೆಚ್ಚಿದ್ದು, ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ಮಾರುಕಟಟೆಯಲ್ಲಿ ಧಾರಣೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ವಿಶ್ಲೇಷಕರು.

ಈ ನಡುವೆ ಹೊಸ ಅಡಿಕೆ ಧಾರಣೆಯೂ ಏರಿಕೆ ಕಾಣುತ್ತಿದೆ. ಸದ್ಯ ಕಿಲೋ ಒಂದಕ್ಕೆ 5 ರೂ. ಏರಿಕೆಯಾಗಿದ್ದು, ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!