ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ ಕೇಂದ್ರ ಸಂಪುಟ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ನೈಸರ್ಗಿಕ ನಾರಿ‌ನ ಸಸ್ಯವಾದ ಸೆಣಬಿನ ಬೆಳೆಗಾರರಿಗೆ ಒಂದು ಸಿಹಿ ಸುದ್ದಿಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2022-23ನೇ ಹಂಗಾಮಿಗಾಗಿ ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.)ಯನ್ನು ಅನುಮೋದಿಸಿದೆ. ಇದು ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸುಗಳನ್ನು ಆಧರಿಸಿದೆ.

ಕಚ್ಚಾ ಸೆಣಬಿನ ಎಂ.ಎಸ್.ಪಿ. (ಟಿಡಿ5 ದರ್ಜೆಗೆ ಸಮನಾದ ಟಿ.ಡಿ.ಎನ್3) ಯನ್ನು 2022-23 ಹಂಗಾಮಿಗೆ ಹಿಂದಿನ ವರ್ಷಕ್ಕಿಂತ ₹ 250 ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಲ್‌ಗೆ ₹ 4750 ನಿಗದಿಪಡಿಸಲಾಗಿದೆ. ಇದು ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇ. 60.53ರಷ್ಟು ಲಾಭವನ್ನು ಖಚಿತಪಡಿಸುತ್ತದೆ. 2022-23ರ ಹಂಗಾಮಿನ ಕಚ್ಚಾ ಸೆಣಬಿನ ಎಂ.ಎಸ್.ಪಿ.ಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ನಿಗದಿಪಡಿಸುವ 2018-19ರ ಬಜೆಟ್‌ನಲ್ಲಿ ಸರಕಾರ ಘೋಷಿಸಿದ ತತ್ವಕ್ಕೆ ಅನುಗುಣವಾಗಿದೆ.

ಇದು ಕನಿಷ್ಠ ಶೇ. 50ರಷ್ಟು ಲಾಭದ ಭರವಸೆ ನೀಡುತ್ತದೆ. ಸೆಣಬು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಾತ್ರಿಪಡಿಸುವ ಮತ್ತು ಗುಣಮಟ್ಟದ ಸೆಣಬನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಪ್ರಮುಖ ಮತ್ತು ಪ್ರಗತಿಪರ ಕ್ರಮಗಳಲ್ಲಿ ಒಂದಾಗಿದೆ.

ಭಾರತ ಸೆಣಬು ನಿಗಮ (ಜೆಸಿಐ) ಬೆಲೆ ಬೆಂಬಲ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಕೇಂದ್ರ ಸರಕಾರದ ನೋಡಲ್ ಏಜೆನ್ಸಿಯಾಗಿ ಮುಂದುವರಿಯುತ್ತದೆ ಮತ್ತು ಅಂತಹ ಕಾರ್ಯಾಚರಣೆಗಳಿಂದ ಉಂಟಾಗುವ ನಷ್ಟವನ್ನು ಕೇಂದ್ರ ಸರಕಾರವು ಸಂಪೂರ್ಣವಾಗಿ ಮರುಪಾವತಿ ಮಾಡುತ್ತದೆ.

ಸೆಣಬು ಕಡಿಮೆ ಗೊಬ್ಬರ ಅಥವಾ ಕ್ರಿಮಿನಾಶಕಗಳನ್ನು ಅವಲಂಬಿಸಿರುವ ಒಂದು ಮಳೆ-ಆಧಾರಿತ ಬೆಳೆ. ಸೆಣಬು ಅತ್ಯಂತ ಸುಲಭವಾಗಿ ಸಿಗುವ ನೈಸರ್ಗಿಕ ನಾರುಗಳಲ್ಲಿ ಒಂದಾಗಿದೆ. ಹತ್ತಿಯ ನಂತರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿ ವಿವಿಧ ರೀತಿಯಲ್ಲಿ ಬಳಕೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!