Sunday, December 3, 2023

Latest Posts

ಹಸಿ ಹುಣಸೆ ಹಣ್ಣಿನ ತೊಕ್ಕು ಇದ್ದರೆ ಉಪ್ಪಿನಕಾಯಿ ಬೇಡವೇ ಬೇಡ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಊಟಕ್ಕೆ ಸೈಡ್‌ ಡಿಶ್‌ ಆಗಿ ತಹರೇವಾರಿ ಉಪ್ಪಿನಕಾಯಿ ಬಯಸೋದು ಸಹಜ. ಆದರೆ ಎಲ್ಲಾ ಸಮಯದಲ್ಲೂ ಉಪ್ಪಿನಕಾಯಿ ಲಭ್ಯವಿರುವುದಿಲ್ಲ. ಹಾಗಂತ ಹಾಗೆ ಊಟ ಮಾಡಲು ರುಚಿಸದ ಸಮಯದಲ್ಲಿ ಈ ಹುಣಸೆ ಹಣ್ಣಿನ ತೊಕ್ಕು ಬಹಳ ರುಚಿಕರ ನೋಡಿ…ಹುಣಸೆ ಸೀಸನ್‌ನಲ್ಲಿ ಒಮ್ಮೆ ಮಾಡಿಕೊಂಡರೆ ಸಾಕು ಒಂದು ಅಥವಾ ಎರಡು ವರ್ಷಗಳ ಕಾಲ ಕೆಡುವುದಿಲ್ಲ..ಮಾಗಿದಷ್ಟು ಹೆಚ್ಚು ರುಚಿಕರ. ಹಾಗಾದರೆ ಬನ್ನಿ ಮಾಡುವ ವಿಧಾನ ನೋಡುವ.

ಬೇಕಾಗುವ ಸಾಮಗ್ರಿಗಳು

೧. ಹಸಿ ಹುಣಸೆಹಣ್ಣು

೨. ಅರಿಶಿಣ ಪುಡಿ

೩. ಉಪ್ಪು

೪. ಹಸಿ/ಒಣ ಮೆಣಸಿನ ಕಾಯಿ

ಮಾಡುವ ವಿಧಾನ

ಮೊದಲಿಗೆ ಹದವಾಗಿ ಹಣ್ಣಾಗಿರುವ ಹುಣಸೆ ಹಣ್ಣನ್ನು ತೆಗೆದುಕೊಳ್ಳಿ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಅರ್ಧ ಕೆಜಿ. ಒಂದು ಕೆಜಿ ನಿಮ್ಮ ಇಷ್ಟಕ್ಕನುಗುಣವಾಗಿ ತೆಗೆದುಕೊಂಡು ಅದರ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಮತ್ತು ಹೆಚ್ಚಾಗಿ ಖಾರ ತಿನ್ನುವವರು ೩೦೦/೪೦೦ ಗ್ರಾಂ ಬಳಸಬಹುದು.

ಇವೆಲ್ಲವನ್ನು ಒಟ್ಟಿಗೆ, ರುಬ್ಬುವ ಗುಂಡಿನಲ್ಲಿ ರುಬ್ಬಬೇಕು. ಮಿಕ್ಸಿ ಕೂಡ ಮಾಡಬಹುದು ಆದ್ರೆ ನೀರನ್ನು ಉಪಯೋಗಿಸುವಂತಿಲ್ಲ.(ಮಿಕ್ಸಿ ಬಳಸಿದರೆ ರುಚಿ ಕೆಡುತ್ತದೆ, ಆಯ್ಕೆ) ಹುಣಸೆ ಹಣ್ಣಿನ ರಸದಿಂದಲೇ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಬೇಕು. ಮೊದಲ ಬಾರಿಗೆ ಅರ್ಧಂಬರ್ಧ ರುಬ್ಬಿ ಒಂದು ಜಾರಿನಲ್ಲಿ ಸ್ಟೋರ್‌ ಮಾಡಬೇಕು. ಒಂದು ವಾರ ಅಥವಾ ಹತ್ತು ದಿನಗಳ ಬಳಿಕ ಮತ್ತೊಮ್ಮೆ ಹೊರತೆಗೆದು ರುಬ್ಬಬೇಕು. ನುಣ್ಣಗೆ ಹುಣಸೆಹಣ್ಣಿನ ಬೀಜ ಸಮೇತ ರುಬ್ಬಿ(ಹುಣಸೆ ಬೀಜ ಎಳೆಯದ್ದಾಗಿರಬೇಕು) ಅದಕ್ಕೆ ಸ್ವಲ್ಪ ಹೆಚ್ಚಾಗಿ ಎಣ್ಣೆ, ಸಾಸಿವೆ ಕರಿಬೇವಿನೊಂದಿಗೆ ಚೆನ್ನಾಗಿ ಒಗ್ಗರಣೆ ಸೇರಿಸಿ ಬಿಟ್ಟರೆ ಆಹಾ…ಹುಣಸೆ ಹಣ್ಣಿನ ತೊಕ್ಕು ರೆಡಿ. ಇದು ವರ್ಷಾನುಗಟ್ಟಲೆ ಕೆಡುವುದಿಲ್ಲ. ಜ್ವರ, ಬಾಯಿಗೆ ಊಟ ರುಚಿಸದಿದ್ದಾಗ ಈ ರೆಸಿಪಿ ಮಾಡಿ ನೋಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!