ಸೌದಿ ಸಾಮ್ರಾಜ್ಯದೊಂದಿಗೆ ಘರ್ಷಣೆಗಿಳಿದ ಎಲಾನ್‌ ಮಸ್ಕ್‌: ಆಗಿದ್ದೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರಪಂಚದ ಅತ್ಯಂತ ಶ್ರೀಮಂತ ಎಲಾನ್‌ ಮಸ್ಕ್‌ ಟ್ವೀಟರ್‌ ಅನ್ನು ಖರೀದಿಸಲು ಮುಂದಾಗಿರುವ ಬೆನ್ನಲ್ಲೇ ಟ್ವೀಟರ್‌ ನ ಶೇರುದಾರರ ವಿರೋಧಗಳು ವ್ಯಕ್ತವಾಗುತ್ತಿದೆ. ಹಲವು ಸ್ಟೇಕ್‌ ಹೋಲ್ಡರ್‌ ಗಳು ತಮ್ಮ ಶ್ರೇಯಾಂಕಗಳನ್ನು ಮುಚ್ಚುತ್ತಿದ್ದು ಇಂಥಹ ಶೇರ್‌ ಹೋಲ್ಡರ್‌ ಗಳಲ್ಲಿ ಒಬ್ಬರಾದ ಸೌದಿಯ ತಲಾಲ್‌ ಅಲ್ವಲೀದ್‌ ಮಸ್ಕ್‌ ನೀಡಿದ 43 ಬಿಲಿಯನ್‌ ಆಫರ್‌ ಅನ್ನು ಬಹಿರಂಗವಾಗಿ ತಿರಸ್ಕರಿಸುವುದಲ್ಲದೇ ಟ್ವೀಟ್ಟರ್‌ ನ ಬೆಳವಣಿಗೆಗೆ ಈ ಆಫರ್‌ ತಕ್ಕದಲ್ಲ ಎಂದು ಟ್ವೀಟ್‌ ನಲ್ಲೇ ಹೇಳಿದ್ದಾರೆ.

ಅವರ ಈ ಟ್ವೀಟ್‌ ಮತ್ತೊಮ್ಮೆ ಸೌದಿ ಸಾಮ್ರಾಜ್ಯದೊಂದಿಗೆ ಟ್ವೀಟರ್ ಗೆ ಇರುವ ವ್ಯಾಪಾರ ಒಪ್ಪಂದಗಳ ವಿರುದ್ಧ ಅನುಮಾನ ಹುಟ್ಟುಹಾಕಿದೆ.

ಈ ಹಿನ್ನೆಲೆಯಲ್ಲಿ ಸೌದಿ ಸಾಮ್ರಾಜ್ಯದೊಂದಿಗೆ ನೇರವಾಗಿ ಸಂಘರ್ಷಕ್ಕಿಳಿದಿರುವ ಮಸ್ಕ್‌ ಟ್ವೀಟರ್‌ ನ ಸೌದಿ ಲಿಂಕ್‌ ಗಳನ್ನು ಹೈಲೈಟ್‌ ಮಾಡುವ ಮೂಲಕ ಅವರ ವಿರುದ್ಧ ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಮಸ್ಕ್‌ “ಟ್ವಿಟರ್ ಸರ್ವಾಧಿಕಾರಿ ಆಡಳಿತಗಳೊಂದಿಗೆ ಸಂಪರ್ಕವನ್ನು ಹೊಂದಿದೆ, ಅದು ಮುಕ್ತ ವಾತಾವರಣಕ್ಕೆ ಪೂರಕವಾದುದಲ್ಲ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!