RBI ಯಿಂದ ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಕೋಟಿ ದಂಡ: ಕೊನೆಗೆ ಕಟ್ಟಿದ್ದು ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ (ಎಫ್ಸಿಆರ್ಎ) ಉಲ್ಲಂಘಿಸಿದ ಆರೋಪದ ಮೇರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 10ಕೋಟಿ ರೂಪಾಯಿ ದಂಡ ವಿಧಿಸಿದೆ

ಆದ್ರೆ ಅಧಿಕಾರಿಗಳ ಚೌಕಾಶಿ ಬಳಿಕ 3 ಕೋಟಿ ರೂ ದಂಡ ಕಟ್ಟಲಾಗಿದೆ ಎಂದು ಹೇಳಲಾಗಿದೆ.
ಟಿಟಿಡಿ ವಿದೇಶಿ ದೇಣಿಗೆಯನ್ನು ಬಳಸಿಕೊಂಡ ರೀತಿಯಲ್ಲೂ ಕೇಂದ್ರ ಸಚಿವಾಲಯ ತಪ್ಪು ಕಂಡುಹಿಡಿದಿದ್ದು, ಇದಲ್ಲದೆ, ಟಿಟಿಡಿ ವಿದೇಶಿ ಕೊಡುಗೆಗಳ ಮೂಲಕ ಗಳಿಸಿದ ಬಡ್ಡಿಯ ಬಳಕೆಯ ಬಗ್ಗೆಯೂ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ದೇವಾಲಯದ ಟ್ರಸ್ಟ್ನ ಎಫ್ಸಿಆರ್ಎ ನೋಂದಣಿಯನ್ನು ತಾಂತ್ರಿಕ ವ್ಯತ್ಯಾಸಗಳಿಂದಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ನಿಧಿಯ ದುರುಪಯೋಗದಿಂದಲ್ಲ ಎಂದು ಹೇಳಲಾಗಿದೆ. ಮಾರ್ಚ್ 2023 ಕ್ಕೆ ಐದು ವರ್ಷಗಳ ಅವಧಿಯಲ್ಲಿ, ದೇವಾಲಯದ ಟ್ರಸ್ಟ್ 30 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಂಗ್ರಹಿಸಿದೆ.

2020ರಲ್ಲಿ ಎಫ್ಸಿಆರ್ಎಗೆ ಮಾಡಿದ ತಿದ್ದುಪಡಿಗಳ ಪ್ರಕಾರ, ಎನ್ಜಿಒಗಳು ವಿದೇಶಿ ಕೊಡುಗೆಗಳನ್ನು ಎಸ್ಬಿಐ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಇದನ್ನು ಅನುಸರಿಸಿ, ಟಿಟಿಡಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಎಫ್ಸಿಆರ್ಎಯು ‘ಹುಂಡಿ’ಯಲ್ಲಿ ಸ್ವೀಕರಿಸಿದ ಕೊಡುಗೆಗಳ ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸಿಲ್ಲ ಎನ್ನಲಾಗಿದೆ.

ಟಿಟಿಡಿ ವಿಳಂಬವೇ ತೊಂದರೆಗೆ ಕಾರಣ ಕಳೆದ ಮೂರು ವರ್ಷಗಳಿಂದ ಟಿಟಿಡಿ ತನ್ನ ಎಫ್ಸಿಆರ್ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ತಿರುಮಲದ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುವ ಟಿಟಿಡಿ ಮತ್ತು ರಾಜ್ಯ ಸರ್ಕಾರವು ಎಫ್ಸಿಆರ್ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ಇದರ ನವೀಕರಣವನ್ನು ಟಿಟಿಡಿ ವಿಳಂಬ ಮಾಡಿರುವುದೇ ತೊಂದರೆಗೆ ಕಾರಣ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ ತಾಂತ್ರಿಕ ಕಾರಣಗಳಿಂದ ಎಫ್ಸಿಆರ್ಎ ನೋಂದಣಿ ಸ್ಥಗಿತಗೊಂಡಿದೆ. ಇದು ವಿದೇಶಿ ಕೊಡುಗೆ ದುರುಪಯೋಗದಿಂದ ಆಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!