RCB Unbox: ಆ ಇಡ್ಲಿ ಯಾಕೆ ಬೇಡ ಅಂದ್ರು ನಟ ಸುದೀಪ್, ನಿಮಗೇನಾದ್ರು ಗೊತ್ತಾಯ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

RCB ಫ್ರಾಂಚೈಸ್ ತನ್ನ RCB ಅನ್ಬಾಕ್ಸಿಂಗ್ ಶೋನ ಮೊದಲ ಟ್ರೇಲರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಮೊದಲ ಪ್ರೋಮೋದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದರು. ಎರಡನೇ ಪ್ರೋಮೋದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡು RCB ಹೆಸರು ಬದಲಾಗಲಿದೆ ಎಂದು ಸುಳಿವು ನೀಡಿದ್ದಾರೆ. ಇದಾದ ನಂತರ ಶಿವಣ್ಣ ಲಾಂಗ್‌ ಹಿಡಿದು ಪ್ರೋಮೋ ಹಂಚಿಕೊಂಡಿದ್ದರು. ಈಗ ಈ ಇಡ್ಲಿ ಬೇಡ ಎಂದು ಸುದೀಪ್ ಮತ್ತೊಂದು ಪ್ರಶ್ನೆ ಹಾಕಿದ್ದಾರೆ.

ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್‌ಸಿಬಿ ತಮ್ಮ ಅಭಿಯಾನದ ಆರಂಭಕ್ಕೂ ಮುನ್ನ ಈ ಬಾರಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಹೇಳಲಾಗಿದೆ.

RCB ಅನ್‌ಬಾಕ್ಸಿಂಗ್ ಈವೆಂಟ್ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈ ಬಾರಿಯ ಕಾರ್ಯಕ್ರಮದ ವಿಶೇಷವೆಂದರೆ RCB ತಂಡದ ಜೆರ್ಸಿ ಮತ್ತು ಅಭಿಮಾನಿಗಳಿಗೆ ಅನೇಕ ಸರ್ಪ್ರೈಸ್ ಗಳು ಕಾದಿವೆ ಎನ್ನಲಾಗಿದೆ. ಈ ಬಾರಿ RCB ತಂಡ ಯಾವ ರೀತಿ ತನ್ನ ಅಭಿಮಾನಿಗಳಿಗೆ ಮನರಂಜನೆ ನೀಡಲಿದೆ ಎಂಬುದು ಕಾಡು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!