Wednesday, March 29, 2023

Latest Posts

SPORTS| 33 ಎಸೆತಗಳಲ್ಲಿ 99 ರನ್, ಡಿವೈನ್‌ ಆಟಕ್ಕೆ ಗುಜರಾತ್‌ ಸುಸ್ತೋ ಸುಸ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಅಂಗವಾಗಿ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಿದ್ದು, ಬೆಂಗಳೂರು ಬಾಲೆಯರ ಅಬ್ಬರಕ್ಕೆ ಗುಜರಾತ್‌ ಥಂಡಾ ಹೊಡೆದಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ RCB ಗರ್ಲ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು. 189 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 15.3 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.

ಬೆಂಗಳೂರಿನ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲಿನಿಂದಲೂ ಉತ್ಸುಕತೆ, ಮಿಂಚಿನ ಬ್ಯಾಟಿಂಗ್ ಪಂದ್ಯವನ್ನು ಏಕಪಕ್ಷೀಯವಾಗಿಸಿತು. ಅತ್ಯುತ್ತಮ ಆಟದ ಮೂಲಕ ಮನರಂಜನೆ ನೀಡಿದ ಸೋಫಿ ಡಿವೈನ್ ಕೇವಲ 36 ಎಸೆತಗಳಲ್ಲಿ 99 ರನ್ ಗಳಿಸಿದರು. ಕೇವಲ ಒಂದೇ ಒಂದು ರನ್‌ನಿಂದ ಶತಕ ಮಿಸ್‌ ಮಾಡಿಕೊಂಡರು. ತನ್ನ ಬಿರುಸಿನ ಹೊಡೆತಗಳು ಮತ್ತು ಬೌಂಡರಿಗಳ ಮೂಲಕ ಗುಜರಾತ್ ಬೌಲರ್‌ಗಳನ್ನು ಸುಸ್ತು ಮಾಡಿದ ಸೋಫಿ ತನ್ನ ಶತಕದಿಂದ ಒಂದು ರನ್ ಅಂತರದಲ್ಲಿ ಔಟಾದರು. ಆಕೆಯ ಸ್ಕೋರ್‌ನಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದವು.

ಸತತ ಐದು ಪಂದ್ಯಗಳಲ್ಲಿ ಸೋತಿರುವ ಆರ್ ಸಿಬಿ ಮಾರ್ಚ್ 15ರಂದು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಗೆಲುವಿನ ನಾಗಾಲೋಟಕ್ಕೆ ಲಗ್ಗೆ ಇಟ್ಟಿತ್ತು. ಇದೀಗ ಗುಜರಾತ್ ಜೈಂಟ್ಸ್ ಎರಡನೇ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!