ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಆದರೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಒಂದು ವೇಳೆ ಮಹಾಫೈನಲ್ ಪಂದ್ಯ ಮಳೆಯಿಂದಾಗಿ ಸಂಪೂರ್ಣ ರದ್ದಾದರೆ ಬಿಸಿಸಿಐ ನಿಯಮಗಳ ಪ್ರಕಾರ ಚಾಂಪಿಯನ್ ಪಟ್ಟ ಯಾರಿಗೆ ಸಿಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಪಂದ್ಯ ಸಂಪೂರ್ಣ ರದ್ದಾದರೆ ಟ್ರೋಫಿ ಯಾರಿಗೆ?
ಬಿಸಿಸಿಐನ ಅಂತಿಮ ನಿಯಮಗಳ ಪ್ರಕಾರ, ನಿಗದಿತ ದಿನ ಮತ್ತು ಮೀಸಲು ದಿನ ಎರಡೂ ದಿನಗಳೂ ಮಳೆ ಬಂದು, ಕನಿಷ್ಠ 5 ಓವರ್‌ಗಳ ಪಂದ್ಯ ಅಥವಾ ಸೂಪರ್ ಓವರ್ ನಡೆಸಲು ಸಾಧ್ಯವಾಗದಿದ್ದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ, ಐಪಿಎಲ್ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಪ್ರಸಕ್ತ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಆರ್‌ಸಿಬಿಗಿಂತ ಹೆಚ್ಚಿನ ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲಿನ ಸ್ಥಾನದಲ್ಲಿ ಇರುವುದರಿಂದ, ಪಂದ್ಯ ರದ್ದಾದರೆ ಜಿಟಿ ಚಾಂಪಿಯನ್ ಆಗಲಿದೆ. ಇದು ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.
ಮಳೆ ಬಂದರೆ ಬಿಸಿಸಿಐ ಜಾರಿಗೊಳಿಸುವ ನಿಯಮಗಳು:
120 ನಿಮಿಷಗಳ ಹೆಚ್ಚುವರಿ ಸಮಯ: ಫೈನಲ್ ಪಂದ್ಯದ ನಿಗದಿತ ದಿನದಂದು ಪೂರ್ಣ 20 ಓವರ್‌ಗಳ ಆಟವನ್ನು ನಡೆಸಲು ಬಿಸಿಸಿಐ 2 ಗಂಟೆಗಳ ಹೆಚ್ಚುವರಿ ಸಮಯವನ್ನು ಮೀಸಲಿಟ್ಟಿರುತ್ತದೆ.
ಓವರ್‌ಗಳ ಕಡಿತ ಮತ್ತು ಡಿಎಲ್‌ಎಸ್: ಮಳೆ ಸತತವಾಗಿ ಬಂದು ಸಮಯ ವ್ಯರ್ಥವಾದರೆ ಮಾತ್ರ ಓವರ್‌ಗಳನ್ನು ಕಡಿತಗೊಳಿಸಲಾಗುತ್ತದೆ. ಪಂದ್ಯದ ಫಲಿತಾಂಶ ನಿರ್ಧಾರವಾಗಲು ಎರಡೂ ತಂಡಗಳು ಕನಿಷ್ಠ ತಲಾ 5 ಓವರ್‌ಗಳನ್ನು ಆಡುವುದು ಕಡ್ಡಾಯ. ಪಂದ್ಯದ ಮಧ್ಯದಲ್ಲಿ ಮಳೆ ಬಂದರೆ ಡಕ್ವರ್ತ್-ಲೂಯಿಸ್-ಸ್ಟರ್ನ್ ವಿಧಾನವನ್ನು ಬಳಸಲಾಗುತ್ತದೆ.
ಮೀಸಲು ದಿನದ ನಿಯಮ: ನಿಗದಿತ ದಿನದಂದು ಕನಿಷ್ಠ 5 ಓವರ್‌ಗಳ ಪಂದ್ಯವೂ ಸಾಧ್ಯವಾಗದಿದ್ದರೆ, ಪಂದ್ಯವನ್ನು ಮರುದಿನಕ್ಕೆ (ಮೀಸಲು ದಿನ) ಮುಂದೂಡಲಾಗುತ್ತದೆ. ಮೊದಲ ದಿನ ಆಟ ಎಲ್ಲಿಗೆ ನಿಂತಿತ್ತೋ, ಮೀಸಲು ದಿನದಂದು ಅಲ್ಲಿಂದಲೇ ಆಟ ಮುಂದುವರಿಯುತ್ತದೆ.
ಕೊನೆಯ ಚಾನ್ಸ್ ಸೂಪರ್ ಓವರ್: ಮೀಸಲು ದಿನದಂದೂ ಮಳೆ ಬಂದು ಪೂರ್ಣ ಪಂದ್ಯ ಸಾಧ್ಯವಾಗದಿದ್ದರೆ, ಔಟ್‌ಫೀಲ್ಡ್ ಸಿದ್ಧಗೊಂಡ ತಕ್ಷಣ ಕೇವಲ ಸೂಪರ್ ಓವರ್ ನಡೆಸಿ ಚಾಂಪಿಯನ್ ಯಾರೆಂದು ನಿರ್ಧರಿಸಲು ಅಂಪೈರ್‌ಗಳು ಕೊನೆಯ ಪ್ರಯತ್ನ ಮಾಡುತ್ತಾರೆ.



