ಸ್ಪೆಷಲ್ ಕೇಕ್ಸ್, ಸ್ವೀಟ್ ಪೇಸ್ಟ್ರೀಸ್, ಬೆಣ್ಣೆ ಬಿಸ್ಕೆಟ್ಟು, ಕೊಬ್ಬರಿ ಬಿಸ್ಕೆಟ್ಟು, ಎಗ್ ಪಫ್ಫು, ಖಾರಾ ಬನ್.. ಇನ್ನು ಮೈಸೂರ್ ಪಾಕ್, ಕೋವಾ, ಪೇಡಾ, ದಿಲ್‌ಖುಷ್…
ಓದ್ತಿದ್ರೇನೇ ಬಾಯಲ್ಲಿ ನೀರು ಬರೋ ಹಾಗಿದೆ ಅಲ್ವಾ? ಬೇಕರಿ ಐಟಂ ಯಾಕಿಷ್ಟು ಟೇಸ್ಟಿ? ಇದೇ ಐಟಂನ ಮನೆಯಲ್ಲಿ ಮಾಡಿದ್ರೆ ಯಾಕೆ ಚೆನ್ನಾಗಿ ಇರೋದಿಲ್ಲ?
ಯಾಕಂದ್ರೆ ಬೇಕರಿಯಲ್ಲಿ ಸಾಕಪ್ಪ ಅನ್ನೋ ಅಷ್ಟು ರೆಡಿಮೇಡ್ ಪುಡಿಗಳು, ಟೇಸ್ಟ್‌ಮೇಕರ್ಸ್, ಲೀಟರ್‌ಗಟ್ಟಲೆ ಎಣ್ಣೆ, ರಾಶಿ ರಾಶಿ ಮೈದಾ ಬಳಸ್ತಾರೆ.
ಸಣ್ಣ ಆಗೋಕೆ ಹಾಗೂ ಆರೋಗ್ಯವಾಗಿರೋಕೆ ಮೊದಲು ಮೈದಾ, ಎಣ್ಣೆ ಹಾಗೂ ಸಕ್ಕರೆ ಬಿಡೋದಕ್ಕೆ ಹೇಳ್ತಾರೆ.. ಆದರೆ ಈ ಮೂರು ಪ್ರಾಡಕ್ಟ್ ಇಲ್ಲದೆ ಬೇಕರಿಯೇ ಇಲ್ಲ. ಅಂಗಡಿ ಮುಚ್ಚಬೇಕಷ್ಟೆ..
ಬ್ರೆಡ್ ಮೈದಾ, ಬಿಸ್ಕೆಟ್ಸ್ ಮೈದಾ, ಕೇಕ್ ಮೈದಾ ಎಲ್ಲವೂ ಅಷ್ಟೆ..
ಯಾಕೆ ತಿನ್ನಬಾರದು?
ಸಿಕ್ಕಾಪಟ್ಟೆ ಅನ್‌ಹೆಲ್ತಿ ಫ್ಯಾಟ್ಸ್ ಇದೆ, ಡಯಾಬಿಟಿಸ್, ಸ್ಟ್ರೋಕ್, ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಹೆಚ್ಚಾಗತ್ತದೆ.
ಮೈದಾ ಜೊತೆಗೆ ಇನ್ನಿತರ ಪ್ರೊಸೆಸ್ ಆಗಿರುವ ಹಿಟ್ಟುಗಳ ಬಳಕೆ ಮಾಡ್ತಾರೆ ಇದು ಆರೋಗ್ಯಕ್ಕೆ ಕೆಟ್ಟದ್ದು.
ಬರೀ ಸಕ್ಕರೆ ಅಷ್ಟೇ ಅಲ್ಲ, ನಾನಾ ರೀತಿಯ ಸಕ್ಕರೆ, ಸಿಹಿ ಪದಾರ್ಥಗಳನ್ನು ಹಾಕ್ತಾರೆ.
ಕಲ್ಲು, ಗಲೀಜು, ಹುಳ, ಕೊಳಕು, ಬೆವರು ಎಲ್ಲವೂ ಸೇರಿರುವ ಸಾಧ್ಯತೆ ಇದೆ