ಬಾಡಿಗೆ ಮನೆ ಹುಡುಕುವ ಮುನ್ನ ಇದನ್ನು ಓದಿ.. ಈ ಎಲ್ಲ ವಿಷಯಗಳು ಗಮನದಲ್ಲಿರಲಿ..

ಬಾಡಿಗೆ ಮನೆ ತಾನೆ, ಪದೆ ಪದೆ ಬದಲಾಯಿಸಬಹುದು ಅಂತ ನೀವನ್ನಬಹುದು. ಆದರೆ ಇದು ಅಷ್ಟೊಂದು ಸುಲಭ ಅಲ್ಲ. ಮನೆ ಪದೇ ಪದೆ ಬದಲಾಯಿಸದರೆ ಲಾಸ್ ಆಗೋದು ಗ್ಯಾರೆಂಟಿ. ಬಾಡಿಗೆಗೆ ಮನೆ ಹುಡುಕುವಾಗ ಈ ಅಂಶಗಳನ್ನ ಗಮನದಲ್ಲಿಡಿ.

  • ನಿಮ್ಮ ಆಫೀಸಿಗೆ ಎಷ್ಟು ದೂರ ಇದೆ, ಮೆಟ್ರೋ, ಬಸ್‌ಗೆ ಎಷ್ಟು ದೂರ ನೋಡಿ..
  • ಏರಿಯಾ ಹೇಗಿದೆ? ಅಕ್ಕ ಪಕ್ಕ ವಾತಾವರಣ ಹೇಗಿದೆ ಅನ್ನೋದು ತುಂಬಾ ಮುಖ್ಯ.
  • ಮನೆಯಲ್ಲಿ ಗಾಳಿ ಬೆಳಕು ಹೇಗಿದೆ ನೋಡಿ.
  • ಮನೆಯಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗತ್ತಾ?
  • ಫ್ರಿಡ್ಜ್, ವಾಶಿಂಗ್ ಮಶೀನ್ ಇಡಲು ಜಾಗ ಇದೆಯಾ?
  • ಅಗ್ರೀಮೆಂಟ್, ಬಾಡಿಗೆ ಕೊಡುವ ದಿನಾಂಕ, ಅಡ್ವಾನ್ಸ್, ಪೇಂಟ್ ಎಲ್ಲದರ ಹಣದ ಬಗ್ಗೆ ಮಾತನಾಡಿ.
  • ಮನೆ ಮುಂದೆ ಬಟ್ಟೆ ಒಣಗಿ ಹಾಕೋಕೆ ಜಾಗ ಇದ್ಯಾ?
  • ಮನೆಯಲ್ಲಿ ನೀರಿನ ಸೌಲಭ್ಯ ಹೇಗಿದೆ? ನೀರು ಉಪ್ಪೋ, ಸಿಹಿಯೋ ಗಮನಿಸಿ.
  • ಪಾರ್ಕಿಂಗ್ ವ್ಯವಸ್ಥೆ ಹೇಗಿದೆ?
  • ಸುತ್ತಮುತ್ತ ತರಕಾರಿ, ದಿನಸಿ ಅಂಗಡಿಗಳಿದೆಯಾ?
  • ಮನೆಯ ಮುಂದೆ ಸಿಸಿ ಕ್ಯಾಮೆರಾ ಇದೆಯಾ?
  • ವಾಸ್ತು ನಂಬುವವರಾದ್ರೆ ವಾಸ್ತು ಚೆಕ್ ಮಾಡಿಕೊಳ್ಳಿ.
  • ಪ್ರೈವೆಸಿ ನೋಡಿ, ಅಕ್ಕಪಕ್ಕದ ಮನೆ ಅಂಟಿದಂತೆ ಇದ್ದರೆ, ಮಾತುಗಳ ಕೇಳಿ ಸಾಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!