“ಕೊರೋನಾ ಸೋಂಕಿನೊಂದಿಗೆ ಬದುಕಲು ಸಿದ್ಧ: ಕ್ವಾರಂಟೈನ್-ಲಾಕ್ ಡೌನ್ ಇಲ್ಲ!”

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಸೋಂಕಿನೊಂದಿಗೆ ಬದುಕಲು ಸಿದ್ಧವಾಗಿದ್ದೇವೆ. ಯಾವುದೇ ಕ್ವಾರಂಟೈನ್ ಅಥವಾ ಲಾಕ್ ಡೌನ್ ನಿಯಮಗಳನ್ನು ವಿಧಿಸುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ತಿಳಿಸಿದೆ.
ಈ ಬಗ್ಗೆ ವರದಿ ಮಾಡಿದ ಪಿಟಿಐ ಸುದ್ದಿ ಸಂಸ್ಥೆ, ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ವ್ಯವಸ್ಥೆಯಲ್ಲಿ ಹೆಚ್ಚು ಪ್ರಾಯೋಗಿಕ ಕೆಲಸಗಳನ್ನು ಮಾಡುತ್ತೇವೆ ಎಂದು ತಿಳಿಸಿದೆ.
ದಕ್ಷಿಣ ಆಫ್ರಿಕಾದ ವೈದ್ಯಕೀಯ ತಜ್ಞರು ಪರಿಸ್ಥಿತಿ ಅವಲೋಕಿಸಿ ಮಾತನಾಡಿದ್ದು, ಲಾಕ್ ಡೌನ್ ಹಾಗೂ ಇತರೆ ನಿರ್ಬಂಧಗಳು ಆರ್ಥಿಕತೆ, ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದಾದ್ಯಂತ ವಿಧಿಸುತ್ತಿರುವ ನಿಯಮಗಳನ್ನು ಸರ್ಕಾರ ಕುರುಡಾಗಿ ಅನುಸರಿಸಿ ದೇಶವಾಸಿಗಳಿಗೆ ಸಮಸ್ಯೆಯಾಗಿಸಬಾರದು ಎಂದರು.
ಕೋವಿಡ್ ನ ರೂಪಾಂತರಿ ಸೋಂಕು ಒಮಿಕ್ರಾನ್ ನಿಂದ ದಕ್ಷಿಣ ಆಫ್ರಿಕಾ ತತ್ತರಿಸಿ ಹೋಗಿದ್ದು, ಕೋವಿಡ್ ನಾಲ್ಕನೇ ಅಲೆ ಎದುರಿಸಲು ದೇಶ ಸಜ್ಜಾಗುತ್ತಿದೆ. ಉನ್ನತ ಮಟ್ಟದ ಲಾಕ್‌ಡೌನ್‌ಗಳಿಗೆ ಹೋಗುವುದಕ್ಕಿಂತ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು ಅಗತ್ಯ. ಜನರಿಗೆ ಸಂಪೂರ್ಣ ಲಸಿಕೆ ಹಾಗೂ ಬೂಸ್ಟರ್ ಡೋಸ್ ಒದಗಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 1,02,476 ಸಕ್ರಿಯ ಕೋವಿಡ್ ಕೇಸ್ ಗಳಿದ್ದು, ಒಟ್ಟು 3.5 ಮಿಲಿಯನ್ ಪ್ರಕರಣಗಳು ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!