ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರ ಐಪಿಎಲ್ ನ ಮೆಗಾ ಹರಾಜಿನಲ್ಲಿ ಎಷ್ಟೋ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಉಳಿಸಿಕೊಂಡಿಲ್ಲ. ಆ ಪಟ್ಟಿಯಲ್ಲಿ ಸುರೇಶ್ ರೈನಾ ಕೂಡ ಇದ್ದು ಈ ಬಗ್ಗೆ ಚೆನೈ ಸೂಪರ್ ಕಿಂಗ್ಸ್ ಸ್ಪಷ್ಟನೆ ನೀಡಿದೆ.
ತಂಡದ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದ ಸುರೇಶ್ ರೈನಾರನ್ನು ಖರೀದಿಸಲು ಸಿಎಸ್ ಕೆ ಯಾವುದೇ ಆಸಕ್ತಿ ತೋರಿಸದಿದ್ದನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಬಗ್ಗೆ ತಂಡದ ಸಿಇಒ ಕಾಶಿ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಸುರೇಶ್ ರೈನಾ ತಂಡದ ಯಶಸ್ವಿ ಬ್ಯಾಟರ್ ಗಳಲ್ಲಿ ಒಬ್ಬರು. ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಕೂಡ ಹೌದಯ ಆದರೆ ಅವರನ್ನು ಕೈ ಬಿಡಲು ತಂಡದಿಂದ ಬೇರೆಯೇ ಕಾರಣ ಇದೆ ಎಂದರು.
ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ತಂಡದ ಸಂಯೋಜನೆ ಹಾಗೂ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ನಿಸ್ಸಂಶಯವಾಗಿ ರೈನಾ ಕಳೆದ 12 ವರ್ಷಗಳಿಂದ ಸಿಎಸ್ ಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ತಂಡದ ಫಾರ್ಮ್ ಯಾವ ರೀತಿ ಇರಬೇಕು ಎಂಬುದರ ಮೇಲೆ ಅವಲಂಬಿತವಾಗಿದ್ದು, ಈ ನಿಟ್ಟಿನಲ್ಲಿ , ಅವರು ತಂಡದಲ್ಲಿ ಸರಿಹೊಂದುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಹೀಗಾಗಿ ಸುರೇಶ್ ರೈನಾ ಅವರನ್ನು ಖರೀದಿಸಿಲ್ಲ ಎಂದು ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ