ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾ ಸರಕಾರದ ವಿರುದ್ಧ ಬಂಡೆಯ ಎದ್ದ ರೆಬೆಲ್ ನಾಯಕ ಏಕನಾಥ್ ಶಿಂದೆ ಬಣಕ್ಕೆ ಸಂಸದ ಸಂಜಯ್ ರಾವತ್ ಇಂದು ಮತ್ತೆ ಬೆದರಿಕೆಯ ಮಾತುಗಳನ್ನಾಡಿದ್ದಾರೆ. ಗುವಾಹಟಿಯಲ್ಲಿ ಮೊಕ್ಕಾಂ ಹೂಡಿರುವ 40 ಶಾಸಕರು ಜೀವಂತ ಶವಗಳಿದ್ದಂತೆ. ಅವರ ಆತ್ಮಗಳು ಈಗಾಗಲೇ ದಹಿಸಿವೆ. ಆ ಬಣ ಮಹಾರಾಷ್ಟ್ರಕ್ಕೆ ಹಿಂತಿರುಗಿದಾಗ ಮರಣೋತ್ತರ ಪರೀಕ್ಷೆಗಾಗಿ ಅವರ ದೇಹಗಳನ್ನು ನೇರವಾಗಿ ಅಸೆಂಬ್ಲಿಗೆ ಕಳುಹಿಸಲಾಗುತ್ತದೆ. ಇಲ್ಲಿ ಹೊತ್ತಿಕೊಂಡಿರುವ ಬೆಂಕಿ ಅವರನ್ನು ಏನು ಮಾಡಬಹುದು ಎಂಬುದು ಅವರಿಗೆ ತಿಳಿದಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಶಿವಸೇನೆ ನಾಯಕ ಸಂಜಯ್ ರಾವತ್, ‘ಬಂಡಾಯ ನಾಯಕರ ಕಚೇರಿಗಳು ಪುಡಿಪುಡಿಯಾಗಲಿವೆ. ಅವರು ಮುಂಬೈಗೆ ಬಂದರೆ ಶಿವಸೈನಿಕರು ಏನು ಮಾಡಲಿದ್ದಾರೆ ಗೊತ್ತೇ’ ಎಂದು ಧಮ್ಕಿ ಹಾಕುವ ಮಾತುಗಳನ್ನಾಡಿದ್ದರು.
ಇದೀಗ ಶಿವಸೈನಿಕರ ಮನಸ್ಸಿನಲ್ಲಿ ಹೊತ್ತಿಕೊಂಡಿರುವ ಬೆಂಕಿ ಅವರನ್ನು ಸುಡದೇ ಬಿಡದು ಎಂಬ ಹೇಳಿಕೆ ನೀಡಿ ಸಂಜಯ್ ರಾವತ್’ ಬಹಿರಂಗ ಬೆದರಿಕೆವಾಗಿ ಬೆದರಿಕೆಯ ಮಾತುಗಳನ್ನಾಡಿದ್ದಾರೆ.