ರೆಬೆಲ್‌ ಸ್ಟಾರ್ ಅಂಬರೀಶ್ ರ ಪ್ರೀತಿಯ ಶ್ವಾನ ಬುಲ್‌ ಬುಲ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರೆಬೆಲ್‌ ಸ್ಟಾರ್ ಅಂಬರೀಶ್ ಸಾವಿನ ಬಳಿಕ ಆಘಾತಕ್ಕೊಳಗಾಗಿದ್ದ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಗೆ ಇದೀಗ ಮತ್ತೊಂದು ನೋವಿನ ಸಂಗತಿ ಎದುರಾಗಿದೆ.
ಅಂಬರೀಶ್ ಪ್ರೀತಿಯಿಂದ ಸಾಕಿದ್ದ ಎರಡು ಶ್ವಾನಗಳು ಅಂದರೆ ಒಂದು ಕನ್ವರ್ ಮತ್ತೊಂದು ಬುಲ್ ಬುಲ್. ಅದ್ರಲ್ಲಿ ಅಂಬರೀಶ್ ತೀರಿಕೊಂಡ ಬಳಿಕ ಕನ್ವರ್ ಊಟ ಬಿಟ್ಟು ಸಾವನ್ನಪ್ಪಿತ್ತು. ಇದೀಗ ಅವರ ಮತ್ತೊಂದು ಮುದ್ದಿನ ಶ್ವಾನ ಬುಲ್ ಬುಲ್ ಕೂಡ ಇಹಲೋಕ ತ್ಯಜಿಸಿದೆ.
ಅಂಬರೀಶ್ ನಿಧನರಾದ ಬಳಿಕ ಅಂದರೆ 2021 ಮೇ 24ರಂದು ಕನ್ವರ್ ಕೊನೆಯುಸಿರೆಳೆದಿತ್ತು. ಸುಮಾರು ಒಂಬತ್ತು ವರ್ಷಗಳಿಂದ ಅಂಬರೀಶ್ ಕುಟುಂಬದ ಜೊತೆ ಬುಲ್ ಬುಲ್ ಸದಸ್ಯನಾಗಿದ್ದ. ಆದರೆ ಇದೀಗ ಬುಲ್ ಬುಲ್ ಸಾವನ್ನಪ್ಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!