ಹೊಸದಿಗಂತ ಡಿಜಿಟಲ್ ಡೆಸ್ಕ್;
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ವಾಕ್ ಸಮಾರಾ ಕೇಂದ್ರದ ಬಾಗಿಲನ್ನು ತಟ್ಟಿದೆ. ಹಿಂದಿ ಹೇರಿಕೆ ಮತ್ತು ತಮಿಳು ಗೀತೆಯಿಂದ ‘ದ್ರಾವಿಡ’ ಪದವನ್ನು ತೆಗೆದುಹಾಕಿರುವ ಕುರಿತು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಿಎಂ ಎಂಕೆ ಸ್ಟಾಲಿನ್, ರಾಷ್ಟ್ರೀಯ ಏಕತೆಗೆ ಅವಮಾನ ಮಾಡಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅಕ್ಟೋಬರ್ 18 ರಂದು ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದೊಂದಿಗೆ ಹಿಂದಿ ಮಾಸವನ್ನು ಜಂಟಿಯಾಗಿ ಆಚರಿಸುವುದನ್ನು ಅವರು ಖಂಡಿಸಿದ್ದಾರೆ.
ಈ ಘಟನೆಯು ಹಿಂದಿ ತಿಂಗಳ ಪರಾಕಾಷ್ಠೆಯ ಜತೆಗೆ ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದ ಆಚರಣೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಹಿಂದಿಯೇತರ ರಾಜ್ಯದಲ್ಲಿ ಹಿಂದಿ ಮಾಸವನ್ನು ಆಚರಿಸುತ್ತಿರುವುದು ಇತರೆ ಭಾಷೆಗಳನ್ನು ಕೀಳಾಗಿ ಕಾಣುವ ಪ್ರಯತ್ನವಾಗಿದೆ. ಭಾರತದ ಸಂವಿಧಾನ ಯಾವುದೇ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಅನ್ನು ಮುಖ್ಯವಾಗಿ ಅಧಿಕಾರದ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದು ಸಿಎಂ ಸ್ಟಾಲಿನ್ ಸ್ಪಷ್ಟಪಡಿಸಿದರು.
ತಮಿಳುನಾಡಿನಲ್ಲಿ ಪ್ರತಿ ಸರ್ಕಾರಿ ಕಾರ್ಯಕ್ರಮದ ಆರಂಭದಲ್ಲಿ ತಮಿಳು ಥಾಯ್ ವಜ್ತು – ತಮಿಳು ಗೀತೆಯನ್ನು ಹಾಡಲಾಗುತ್ತದೆ. ಆದರೆ ದೂರದರ್ಶನ ಕಾರ್ಯಕ್ರಮದ ವೇಳೆ ಹಾಡು ಹಾಡುತ್ತಿದ್ದಾಗ ಸಾಲಿನಲ್ಲಿ ‘ದ್ರಾವಿಡ’ ಪದವನ್ನು ಬಿಡುವಂತೆ ಕಲಾವಿದರಿಗೆ ಸೂಚಿಸಲಾಗಿದೆ.
ಪತ್ರದಲ್ಲಿ ಈ ವಿಷಯವನ್ನು ಇದನ್ನು ಉಲ್ಲೇಖಿಸಿರುವ ಸಿಎಂ ಸ್ಟಾಲಿನ್, ದ್ರಾವಿಡ ಅಲರ್ಜಿಯಿಂದ ಬಳಲುತ್ತಿರುವ ರಾಜ್ಯಪಾಲರು ರಾಷ್ಟ್ರಗೀತೆಯಲ್ಲಿ ‘ದ್ರಾವಿಡ’ವನ್ನು ಬಿಡುವಂತೆ ಕೇಳುತ್ತಾರೆಯೇ? ಉದ್ದೇಶಪೂರ್ವಕವಾಗಿ ತಮಿಳುನಾಡು ಮತ್ತು ರಾಜ್ಯದಜನರ ಭಾವನೆಗಳನ್ನು ಅವಮಾನಿಸುತ್ತಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.