ಮೇಷ
ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಅವರೊಂದಿಗೆ ಉತ್ತಮ ಸಂವಹನ ಸಾಧಿಸಿ. ಅಜೀರ್ಣದಂತಹ ಸಮಸ್ಯೆ ಕಾಡಬಹುದು. ಮಿತಾಹಾರ ಸೇವಿಸಿ.
ವೃಷಭ
ಯಾವುದೇ ವಿಷಯದಲ್ಲಿ ಆತುರದ ತೀರ್ಮಾನಕ್ಕೆ ಬರಬೇಡಿ. ಇದರಿಂದ ಇತರರ ಮನಸ್ಸಿಗೆ ನೋವು ಉಂಟಾದೀತು. ಅವರ ಭಾವನೆ ಗೌರವಿಸಿ.
ಮಿಥುನ
ಕಠಿಣ ಹಾಗೂ ಒತ್ತಡದ ಕೆಲಸ. ಸಹೋದ್ಯೋಗಿಗಳ ಜತೆ ಹೊಂದಾಣಿಕೆ ಇರಲಿ. ನಿಮ್ಮದೇ ದಾರಿ ಸರಿ ಎಂಬ ಕಠಿಣ ಧೋರಣೆ ತರವಲ್ಲ.
ಕಟಕ
ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾದೀತು. ವೃಥಾ ಆರೋಪ ಹೊರಿಸಲು ಹೋಗದಿರಿ. ಎಲ್ಲವನ್ನು ಪರಾಮರ್ಶಿಸಿ ನಿರ್ಧಾರ ತಳೆಯಿರಿ.
ಸಿಂಹ
ಆಸ್ಪತ್ರೆ ಭೇಟಿಯಂತಹ ಕಾರಣದಿಂದ ಖರ್ಚು ಹೆಚ್ಚಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರ.
ಕನ್ಯಾ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಆ ಮೂಲಕ ತಪ್ಪಭಿಪ್ರಾಯ ಉಂಟಾಗುವುದನ್ನು ತಡೆಯಬಹುದು. ಧನವ್ಯಯ ಹೆಚ್ಚು.
ತುಲಾ
ಏನೋ ಕಳಕೊಂಡ ಭಾವನೆ. ಹತಾಶೆ. ಅಂತಹ ವಿಚಾರಗಳಿಂದ ದೂರವಿರಿ. ಪಾಸಿಟಿವ್ ಚಿಂತನೆಗಳನ್ನು ತುಂಬಿಕೊಳ್ಳಿ. ಇತರರ ಸಹಕಾರ ಪಡೆಯಿರಿ.
ವೃಶ್ಚಿಕ
ಕೆಲವು ವಿಚಾರ ಚಿಂತೆಗೆ ಕಾರಣವಾಗಲಿದೆ. ಇದರಿಂದ ತಲೆನೋವು ಬಾಧಿಸಬಹುದು. ಹಿರಿಯರ ಸಲಹೆಗಳಿಗೆ ಅಸಮಾಧಾನ ಬೇಡ. ಪಾಲಿಸುವುದು ಒಳಿತು.
ಧನು
ಕುಟುಂಬ ಸದಸ್ಯರ ಜತೆ ಕಾಲ ಕಳೆಯುವ ಅವಕಾಶ. ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಲಾಭ. ನಿಮ್ಮ ಕಾರ್ಯ ಸಕಾಲದಲ್ಲಿ ಮುಗಿಸಿರಿ.
ಮಕರ
ನಿಮಗಿಂದು ಯಶಸ್ವೀ ದಿನ. ಕಾರ್ಯದಲ್ಲಿ ಯಶಸ್ಸು. ಕಾನೂನು ತೊಡಕಿನಲ್ಲಿ ಸಿಲುಕಿಕೊಂಡಿದ್ದರೆ ಇಂದು ನಿರಾಳತೆ ಸಿಗುವುದು.
ಕುಂಭ
ವಾಹನ ಚಲಾವಣೆ ಯಲ್ಲಿ ಸಂಚಾರ ನಿಯಮ ಪಾಲಿಸಿ. ಇಲ್ಲವಾದರೆ ತೊಡಕಿಗೆ ಸಿಲುಕುವಿರಿ. ಮಕ್ಕಳಿಂದ ಸಂತೋಷದ ಸುದ್ದಿ ಕೇಳುವಿರಿ.
ಮೀನ
ಕೆಲಸದಲ್ಲಿ ತೋರುವ ಪ್ರಸಂಗವಧಾನತೆ ಯಶಸ್ಸು ತರುವುದು. ಕೆಲವರ ಟೀಕೆಗೆ ಕಿವಿಗೊಡಬೇಡಿ. ಕುಟುಂಬದಲ್ಲಿ ಸೌಹಾರ್ದತೆ ಸಾಧಿಸಿ.