RECIPE | ನೀವು ಎಂದಾದರೂ ಪೇರಳೆ ಹಣ್ಣಿನ ಚಟ್ನಿಯನ್ನ ಟ್ರೈ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ಬಹಳಷ್ಟು ಚಟ್ನಿಗಳನ್ನ ಮಾಡುತ್ತ ಇರುತ್ತೇವೆ, ತೆಂಗಿನಕಾಯಿ, ಟೊಮೆಟೊ, ಕೆಂಪು ಚಟ್ನಿ, ಪುದಿನಾ ಚಟ್ನಿ ಇಂತಹ ವಿಧವಿಧವಾದ ಚಟ್ನಿಯನ್ನು ಟ್ರೈ ಮಾಡ್ತಿವಿ, ಆದರೆ ನೀವು ಯಾವತ್ತಾದರೂ ಪೇರಳೆ ಹಣ್ಣಿನ ಚಟ್ನಿಯನ್ನು ಟ್ರೈ ಮಾಡಿದ್ದೀರಾ? ಹಾಗಾದರೆ ಒಮ್ಮೆ ಈ ಚಟ್ನಿಯನ್ನು ಮಾಡಿ ಮನೆಮಂದಿ ಜೊತೆ ಕೂತು ಸವಿಯಿರಿ, ಇದು ಕಂಡಿತವಾಗಿಯೂ ನಿಮಗೆ ಇಷ್ಟವಾಗುತ್ತೆ.

ಈ ಸೀಸನ್‌ನಲ್ಲಿ ಮಾಡಿ ಪೇರಳೆ ಹಣ್ಣಿನ ಚಟ್ನಿ

ಬೇಕಾದ ಪದಾರ್ಥಗಳು:

ಮಾಗಿದ ಪೇರಳೆ ಹಣ್ಣು – 4-5
ಸಕ್ಕರೆ – 1 ಕಪ್
ಉಪ್ಪು – ಅರ್ಧ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ತುರಿದ ಶುಂಠಿ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಹಿಂಗ್ – ಚಿಟಿಕೆ
ಎಣ್ಣೆ – 1 ಟೀಸ್ಪೂನ್
ನೀರು – ಕಾಲು ಕಪ್

ಈ ಸೀಸನ್‌ನಲ್ಲಿ ಮಾಡಿ ಪೇರಳೆ ಹಣ್ಣಿನ ಚಟ್ನಿ

ಪೇರಳೆ ಹಣ್ಣಿನ ಚಟ್ನಿ ಮಾಡುವ ವಿಧಾನ:

ಮೊದಲು, ಪೇರಳೆ ಹಣ್ಣುಗಳನ್ನು ತೊಳೆಯಿರಿ, ಸಿಪ್ಪೆ ಸುಲಿದು, ಬೀಜಗಳನ್ನು ತೆಗೆದುಹಾಕಿ ಅವುಗಳನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
ಒಂದು ಪಾತ್ರೆಯಲ್ಲಿ ನೀರನ್ನು ಸುರಿಯಿರಿ, ಪೇರಳೆ ಹಣ್ಣುಗಳನ್ನು ಸೇರಿಸಿ ಅದು ಮೃದುವಾಗುವ ತನಕ ಮ್ಯಾಶ್ ಮಾಡಿ.
ನಂತರ ಒಂದು ಬಾಣಲೆಯಲ್ಲಿ ಮಸಾಲೆ ಮಿಶ್ರಣವನ್ನು ತಯಾರಿಸಿ. ಸಾಸಿವೆ, ಜೀರಿಗೆ ಮತ್ತು ಮೆಂತ್ಯವನ್ನು ಚೆನ್ನಾಗಿ ಹುರಿದು, ತಣ್ಣಗಾಗಲು ಬಿಟ್ಟು, ನಂತರ ಅದನ್ನು ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ, ಕತ್ತರಿಸಿದ ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ.
ಕತ್ತರಿಸಿದ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ ಮತ್ತು ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ. ಬೇಯಿಸಿದ ಪೇರಳೆಯನ್ನು ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಮಿಶ್ರಣಕ್ಕೆ ಸೇರಿಸಿ. ಮಸಾಲೆ, ಸಕ್ಕರೆ, ವಿನೆಗರ್ ಮತ್ತು ಉಪ್ಪನ್ನು ಮಿಶ್ರಣ ಮಾಡಿ ಬೇಯಿಸಿ. ಒಂದು ಬೌಲ್ ನಲ್ಲಿ ಚಟ್ನಿಯನ್ನು ಹಾಕಿ. ಇದೀಗ ರುಚಿಯಾದ ಪೇರಳೆ ಹಣ್ಣಿನ ಚಟ್ನಿ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!