Saturday, December 9, 2023

Latest Posts

ಡಿಜಿಟಲ್ ಪತ್ರಕರ್ತರಿಗೂ ಮಾನ್ಯತೆ: ಸಚಿವ ಅನುರಾಗ್ ಠಾಕೂರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಡಿಜಿಟಲ್ ಮಾಧ್ಯಮಗಳ ಪರ್ತಕರ್ತರಿಗೆ ಮಾನ್ಯತೆ ನೀಡಲಾಗುವುದು. ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನು ಶೀಘ್ರದಲ್ಲೇ ಬರಲಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡುವ ಅರ್ಹ ಪತ್ರಕರ್ತರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಕೋವಿಡ್‌ನಿಂದ ಮೃತಪಟ್ಟ ಪತ್ರಕರ್ತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ ಎಂದಿದ್ದಾರೆ.

ದೇಶದಲ್ಲಿ ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳೆಯುತ್ತಿದೆ. ಅಂತೆಯೇ ಇದರ ಭವಿಷ್ಯ ಉತ್ತಮವಾಗಿದೆ, ತಕ್ಕಂತ ಸವಾಲುಗಳೂ ಇವೆ. ಇವೆಲ್ಲವೂ ಸರಿಹೋಗುವಂತೆ ನೋಡಿಕೊಳ್ಳಲು ನೂತನ ಕಾನೂನೂ ಬೇಕಿದೆ ಎಂದಿದ್ದಾರೆ.

ಇನ್ಮುಂದೆ ಪತ್ರಿಕೆಗಳ ನೊಂದಣಿ ಸರಳಗೊಳಿಸಲಾಗುವುದು, ಶೀಘ್ರದಲ್ಲೇ ನೂತನ ಕಾನೂನು ಜಾರಿಗೆ ಬರಲಿದೆ. ಒಂದು ತಿಂಗಳ ಬದಲು ಒಂದು ವಾರದಲ್ಲಿ ನೋಂದಣಿಗೆ ಅವಕಾಶ ನೀಡಲಾಗುವುದು ಎಂದದ್ದಾರೆ.

ಸರಿಯಾದ ಸುದ್ದಿ, ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಜನರ ಮುಂದೆ ನೀಡಬೇಕು. ಜನರಿಗೆ ಸಹಾಯವಾಗುವ ಸರ್ಕಾರದ ಯೋಜನೆಗಳು ಮಾಧ್ಯಮಗಳ ಮೂಲಕ ಜನರನ್ನು ತಲುಪಬೇಕು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!