ಭಾರತದಲ್ಲಿ ಒಪನ್ ಎಐಯ ಮೊದಲ ಉದ್ಯೋಗಿಯ ನೇಮಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಟ್ ಜಿಪಿಟಿ ಮಾತೃಸಂಸ್ಥೆ ಒಪನ್ ಎಐ ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಕ ಮಾಡಿಕೊಂಡಿದೆ.

ಇಂದು (ಏ.19ರಂದು) ಭಾರತದ ಲೋಕಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಹೊಸ ಸರ್ಕಾರ ರಚನೆಯಾಗಲಿದ್ದು, ದೇಶದಲ್ಲಿ ಎಐ ನಿಯಮಗಳನ್ನು ಜಾರಿಗೆ ತರಲಿದೆ.

ಹೀಗಾಗಿ ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಹಾಗೂ ಪಾಲುದಾರಿಕೆಯ ನೇತೃತ್ವ ವಹಿಸಲು ಪ್ರಾಗ್ಯ ಮಿಶ್ರಾ ಅವರನ್ನು ಮೈಕ್ರೋಸಾಫ್ಟ್ ಬೆಂಬಲಿತ ಒಪನ್ ಎಐ ನೇಮಕ ಮಾಡಿಕೊಂಡಿದೆ.

39 ವರ್ಷದ ಮಿಶ್ರಾ, ಈ ಹಿಂದೆ ಟ್ರೂಕಾಲರ್ ನಲ್ಲಿ ಸಾರ್ವಜನಿಕ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 2018ರಲ್ಲಿ ಮೆಟಾದಲ್ಲಿ ತಪ್ಪು ಮಾಹಿತಿಗಳ ವಿರುದ್ಧ ಅವರು ವಾಟ್ಸಾಪ್ ಆಂದೋಲನ ಪ್ರಾರಂಭಿಸಿದ್ದರು. ವರದಿಗಳ ಪ್ರಕಾರ ಈ ತಿಂಗಳ ಕೊನೆಯಲ್ಲಿ ಮಿಶ್ರಾ ಒಪನ್ ಎಐ ಸೇರಲಿದ್ದಾರೆ.

ಒಪನ್ ಎಐಯಲ್ಲಿ ಪ್ರಾಗ್ಯ ಮಿಶ್ರಾ ಕಾರ್ಯವೇನು?
ಸರ್ಕಾರದ ಜೊತೆಗಿನ ಸಂಬಂಧಗಳ ಮುಖ್ಯಸ್ಥೆಯಾಗಿ ಪ್ರಾಗ್ಯ ಮಿಶ್ರಾ ಅವರನ್ನು ಒಪನ್ ಎಐ ನೇಮಕ ಮಾಡಿಕೊಂಡಿದೆ. ಈ ಮೂಲಕ ಅವರು ಭಾರತದಲ್ಲಿ ಒಪನ್ ಎಐಗೆ ನೇಮಕಗೊಂಡ ಮೊದಲ ಉದ್ಯೋಗಿಯಾಗಿದ್ದಾರೆ. ಈ ತನಕ ಕಂಪನಿ ಮಿಶ್ರಾ ಅವರ ನೇಮಕವನ್ನು ಸಾರ್ವಜನಿಕವಾಗಿ ಪ್ರಕಟಿಸದಿದ್ದರೂ, ಅವರು ಭಾರತದಲ್ಲಿ ಕಂಪನಿಯ ಸಾರ್ವಜನಿಕ ನೀತಿ ವ್ಯವಹಾರಗಳು ಹಾಗೂ ಸಹಭಾಗಿತ್ವದ ನೇತೃತ್ವ ವಹಿಸಲಿದ್ದಾರೆ.

ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ವಿಚಾರದಲ್ಲಿ ಚಾಟ್‌ ಜಿಪಿಟಿಯ ಮೂಲ ಸಂಸ್ಥೆ ಓಪನ್‌ ಎಐ ಮುಂಚೂಣಿಯಲ್ಲಿದೆ. ಈ ಸಂಸ್ಥೆಯಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಅನೇಕ ವಿವಾದಗಳು ಸೃಷ್ಟಿಯಾಗಿದ್ದವು. ಚಾಟ್‌ ಜಿಪಿಟಿಯ ಮೂಲ ಸಂಸ್ಥೆ ಓಪನ್‌ ಎಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸ್ಯಾಮ್‌ ಆಲ್ಟ್‌ಮನ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆದರೆ, ಆ ಬಳಿಕ ಕಂಪನಿಯ ಆಂತರಿಕ ವಲಯದಲ್ಲಿ ಆಲ್ಟ್ ಮನ್ ಮರುನೇಮಕಕ್ಕೆ ಒತ್ತಾಯ ಹೆಚ್ಚಾದ ಬೆನ್ನಲ್ಲೇ ಅವರು ಮರಳಿ ಸಿಇಒ ಹುದ್ದೆಗೆ ನೇಮಕಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!