October 16, 2026
Friday, October 16, 2026
spot_img

Health | ನೆನಪಿನ ಶಕ್ತಿ ಕಡಿಮೆಯಾಗುತ್ತಿದೆಯೇ? ಹಾಗಾದರೆ ಮೊದಲು ಹೊಟ್ಟೆಯ ಕೊಬ್ಬು ಕರಗಿಸಿ

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಹೊಟ್ಟೆಯ ಕೊಬ್ಬು ಸಮಸ್ಯೆ ಎದುರಿಸುತ್ತಿದ್ದಾರೆ. ಏಕೆಂದರೆ ಇದಿಂನ ದಿನಮಾನಗಳಲ್ಲಿ ದೈಹಿಕ ಕೆಲಸಗಳು ಕಡಿಮೆಯಾಗಿ ಕುತಲ್ಲಿಯೇ ಕೆಲಸ ಮಾಡುವುದರಿಂದ ಹೊಟ್ಟೆಯ ಸುತ್ತ ಬೊಜ್ಜು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದು ನಮ್ಮ ಆರೋಗ್ಯ ಮೇಲೆ ಯಾವೆಲ್ಲ ಕೆಟ್ಟ ಪರಿಣಾಮ ಬೀರುತ್ತದೆ ಗೊತ್ತಾ? ಹೌದು ಮಧ್ಯವಯಸ್ಸಿನಲ್ಲಿ ಹೊಟ್ಟೆಯ ಭಾಗದಲ್ಲಿ ಕೊಬ್ಬ ಶೇಖರಣೆಯಾದರೆ ಅದು ನೇರವಾಗಿ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ, ವಯಸ್ಸಾದ ಮೇಲೆ ನೆನಪಿನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ.

ಹೊಟ್ಟೆಯ ಕೊಬ್ಬು ಮೆದುಳಿಗೆ ಹೇಗೆ ಮಾರಕವಾಗಿದೆ

ಇದು ಕೇವಲ ಚರ್ಮದ ಅಡಿಯಲ್ಲಿರುವ ಕೊಬ್ಬಲ್ಲ, ಬದಲಿಗೆ ಹೊಟ್ಟೆಯ ಒಳಗಿನ ಅಂಗಾಂಗಗಳ ಸುತ್ತ ಇರುವ ಕೊಬ್ಬು. ಈ ಕೊಬ್ಬು ಹೆಚ್ಚಾದಷ್ಟೂ ಮೆದುಳಿನ ಗಾತ್ರ ವೇಗವಾಗಿ ಕುಗ್ಗುತ್ತದೆ.

ಹೊಟ್ಟೆಯ ಕೊಬ್ಬು ಹೆಚ್ಚಾದಾಗ ದೇಹದಲ್ಲಿ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ. ಆಗ ಮೆದುಳಿನ ಕ್ಷೀಣತೆ ಉಂಟಾಗುತ್ತದೆ.

ಹೊಟ್ಟೆಯ ಕೊಬ್ಬು ಹೆಚ್ಚಾದಂತೆ ಮೆದುಳಿನ ನೆನಪಿನ ಶಕ್ತಿಯ ಕೇಂದ್ರವಾದ ‘ಹಿಪೊಕ್ಯಾಂಪಸ್’ ವೇಗವಾಗಿ ಕುಗ್ಗುತ್ತದೆ. ಇದು ಭವಿಷ್ಯದಲ್ಲಿ ಬುದ್ಧಿಮಾಂದ್ಯತೆ ಅಥವಾ ಅಲ್ಜೈಮರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಕೇವಲ ದೇಹದ ತೂಕ ಇಳಿಸುವುದಕ್ಕಿಂತ ನಿರ್ದಿಷ್ಟವಾಗಿ ಹೊಟ್ಟೆಯ ಕೊಬ್ಬನ್ನು ಇಳಿಸುವುದು ಮೆದುಳಿನ ದೀರ್ಘಕಾಲದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಾದಾಗ ಮೆದುಳಿಗೆ ರಕ್ತ ಪರಿಚಲನೆ ಕಡಿಮೆಯಾಗಿ ಮೆದುಳಿನ ಕೋಶಗಳು ಹಾನಿಗೊಳಗಾಗುತ್ತವೆ.

Must Read