Wednesday, October 5, 2022

Latest Posts

ವಾಣಿಜ್ಯ ಸಿಲಿಂಡರ್‌ ಬಳಕೆದಾರರಿಗೆ ಸಂತಸ: ಪ್ರತೀ ಸಿಲಿಂಡರ್‌ ಮೇಲೆ 91.50ರೂ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೆಪ್ಟೆಂಬರ್ 1 ರಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ. 91.50ರಷ್ಟು ಕಡಿತಗೊಳಿಸುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ. ಪ್ರಮುಖ ನಗರಗಳಲ್ಲಿ ಮಾತ್ರ ವಾಣಿಜ್ಯ ಸಿಲಿಂಡರ್‌ ಬೆಲೆ ಕಡಿಮೆಯಾಗಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ. 91.50 ಇಳಿಕೆಯಾಗಿದ್ದು 1,885ಕ್ಕೆ ಸಿಗಲಿದೆ. ಪ್ರಮುಖ ನಗರಗಳಲ್ಲಿ ಕಡಿಮೆಯಾದ ಗ್ಯಾಸ್ ಬೆಲೆ ನೋಡುವುದಾದರೆ,

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ. 1885, ಕೋಲ್ಕತ್ತಾದಲ್ಲಿ 1844, ಮುಂಬೈ ಮತ್ತು ಚೆನ್ನೈನಲ್ಲಿ 2045. ಹೈದರಾಬಾದ್‌ನಲ್ಲಿ 2099.5ರಷ್ಟಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ ಬೆಲೆ ಮಾತ್ರ ಇಳಿಕೆಯಾಗಿಲ್ಲ.

ಕಳೆದ ಐದು ತಿಂಗಳಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗುತ್ತಲೇ ಇದೆ. ಮೇ 19, 2022 ರಂದು 2,354 ರೂ.ಗೆ ತಲುಪಿದ್ದ  ಬೆಲೆ ಜೂನ್ 1 ರಂದು 2,219 ರೂಗೆ ಇಳಿಯಿತು. ನಂತರ 98 ರೂ.ನಷ್ಟು ಕುಸಿದು 2,021 ರೂ.ಗೆ ಬಂದಿತು. ತೈಲ ಕಂಪನಿಗಳು ಜುಲೈ 6 ರಂದು 2,012 ರೂ.ಗೆ ಇಳಿಸಿವೆ. ಆಗಸ್ಟ್‌ನಿಂದ ಸಿಲಿಂಡರ್ ಬೆಲೆ 1976 ರೂ. ಇದ್ದು ಇದೀಗ ಮತ್ತಷ್ಟು ಕಡಿಮೆ ಮಾಡಿರುವುದಾಗಿ ತೈಲ ಕಂಪನಿಗಳು ಘೋಷಿಸಿವೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!