800 ಪಾಯಿಂಟ್‌ ಕುಸಿದ ಸೆನ್ಸೆಕ್ಸ್:‌ ಷೇರು ಪೇಟೆ ಹೇಗಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಯ ನಡುವೆ ಭಾರತೀಯ ಷೇರುಮಾರುಕಟ್ಟೆಯು ಋಣಾತ್ಮಕವಾಗಿ ತೆರೆದಿದ್ದು ಬೆಂಚ್‌ ಮಾರ್ಕ್‌ ಸೂಚ್ಯಂಕಗಳಾದ ನಿಫ್ಟಿ 50 200 ಪಾಯಿಂಟ್‌ಗಳಿಗಿಂತ ಕಡಿಮೆಯಾಗಿ 17,550 ಮಟ್ಟಗಳ ಕೆಳಗೆ ವ್ಯಾಪಾರ ಮಾಡಲು ಪ್ರಾರಂಭಿಸಿದರೆ, ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 800 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 58,734 ಮಟ್ಟದಲ್ಲಿ ವಹಿವಾಟು ನಡೆಸಿದೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್:

ಭಾರ್ತಿ ಏರ್‌ಟೆಲ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ತುಸು ಏರಿಕೆ ಕಂಡಿವೆ.

ಇನ್ಫೋಸಿಸ್, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಕುಸಿತವನ್ನು ಅನುಭವಿಸಿವೆ.

ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.5 ರಷ್ಟು ಕುಸಿದಿದ್ದರಿಂದ ವಿಶಾಲವಾದ ಮಾರುಕಟ್ಟೆಗಳು ಸಹ ಕುಸಿತ ಕಂಡವು. ನಿಫ್ಟಿ ರಿಯಾಲ್ಟಿ ಹೊರತುಪಡಿಸಿ, ಎಲ್ಲಾ ವಲಯದ ಸೂಚ್ಯಂಕಗಳು ಕುಸಿದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!