Monday, November 28, 2022

Latest Posts

ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 25ರೂಪಾಯಿ ಇಳಿಕೆ: ಮೆಟ್ರೋ ನಗರಗಳಲ್ಲಿ ಎಷ್ಟಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾಣಿಜ್ಯ ಉದ್ದೇಶಕ್ಕೆ ಬಳಸುವ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೊಮ್ಮೆ ಇಳಿಕೆಯಾಗಿದೆ. ಸಣ್ಣ ವ್ಯಾಪಾರಿಗಳು, ಹೋಟೆಲ್‌ಗಳು, ಟಿಫಿನ್ ಸೆಂಟರ್‌ಗಳು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ತೈಲ ಕಂಪನಿಗಳಿಂದ ದಸರಾ ಬೋನಸ್‌ ಸಿಕ್ಕಿದೆ.

ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಿಸುತ್ತವೆ. ಈ ಕ್ರಮದಲ್ಲಿ ಶನಿವಾರ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ರೂ. 25.5 ಇಳಿಕೆಯಾಗಿದೆ. ಆದರೆ, ಗೃಹಪಯೋಗಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿನ ಬೆಲೆಗಳನ್ನು ಗಮನಿಸಿದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ. 25.5 ಇಳಿಕೆಯಾಗಿ 1859.5ರೂ. ತಲುಪಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,685 ರೂಪಾಯಿ 5 ಪೈಸೆಯಾಗಿದೆ.  ಕೋಲ್ಕತ್ತಾದಲ್ಲಿ ರೂ.36.5ರಷ್ಟು ಇಳಿಕೆಯಾಗಿ ರೂ.1,995ಕ್ಕೆ ತಲುಪಿದೆ. ಮುಂಬೈನಲ್ಲಿ ರೂ.32.5 ಇಳಿಕೆಯಾಗಿ ರೂ. 1,811, ಚೆನ್ನೈನಲ್ಲಿ ರೂ.35.5ರಷ್ಟು ಕುಸಿದು ರೂ.2009.5ಕ್ಕೆ ತಲುಪಿದೆ. ಹೈದರಾಬಾದ್‌ನಲ್ಲಿ ರೂ. 36.50 ಇಳಿಕೆಯೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2063 ರೂಪಾಯಿಯಷ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!