ಹಿಜಾಬ್ ತಗೆಯಲು ನಿರಾಕರಣೆ: ಮನೆಗೆ ತೆರಳಿದ ವಿದ್ಯಾರ್ಥಿನಿಯರು

ಹೊಸದಿಗಂತ ವರದಿ, ಶನಿವಾರಸಂತೆ:

ಹಿಜಾಬ್ ತೆಗೆಯಲು ನಿರಾಕರಿಸಿದ ಆರು ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸಿದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ.
ಶನಿವಾರಸಂತೆಯ ಭಾರತಿ ಪ್ರಥಮ ದರ್ಜೆ ಕಾಲೇಜಿಗೆ ಬುಧವಾರ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದು, ಅದನ್ನು ತೆಗೆದು ತರಗತಿಗೆ ಹೋಗುವಂತೆ ಪ್ರಾಂಶುಪಾಲರು ತಿಳಿಸಿದ್ದಾರೆ.
ಆದರೆ ‘ನಮಗೆ ಮನೆಯಲ್ಲಿ ಹಿಜಾಬ್ ಧರಿಸಲು ಹೇಳಿದ್ದಾರೆ. ಹಿಜಾಬ್ ತೆಗೆಯುವುದಾದರೆ ಕಾಲೇಜಿಗೆ ಹೊಗಬೇಡಿ ಎನ್ನುತ್ತಾರೆ.ಆದ್ದರಿಂದ‌ ತಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ’ ಎಂದು ಹಿಜಾಬ್’ಧಾರಿಣಿಯರು ಪಟ್ಟು ಹಿಡಿದಿದ್ದಾರೆ.
ಆದರೆ ನ್ಯಾಯಾಲಯ ಹಾಗೂ ಸರಕಾರದ‌ ಆದೇಶವಿರುವುದರಿಂದ ಹಿಜಾಬ್ ಧರಿಸಿ ತರಗತಿಯೊಳಗೆ ಹೋಗುವಂತಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದರೂ ಅದಕ್ಕೆ ವಿದ್ಯಾರ್ಥಿನಿಯರು ಒಪ್ಪದಿದ್ದಾಗ ಅವರನ್ನು ಮನೆಗೆ ತೆರಳುವಂತೆ ಕಳುಹಿಸಿದ್ದಾರೆ.
‘ನಾವು ಕಾನೂನಿನಂತೆ ನಡೆದುಕೊಂಡಿದ್ದೇವೆ. ಸರ್ಕಾರದ ಆದೇಶವಿರುವುದರಿಂದ ಹಿಜಾಬ್ ತೆಗೆಯಲು ತಿಳಿಸಿದ್ದೇವೆ. ಹಿಜಾಬ್ ತೆಗೆಯಲು ಒಪ್ಪದಿದ್ದಾಗ ವಾಪಸ್ ಕಳುಹಿಸಿದ್ದೇವೆ’ ಎಂದು ಪ್ರಾಂಶುಪಾಲ ದಯಾನಂದ್ ಸ್ಪಷ್ಟಪಡಿಸಿದ್ದಾರೆ.
ಶನಿವಾರಸಂತೆ ಪೊಲೀಸ್ ವೃತ್ತ ನಿರಿಕ್ಷಕ ಪರಶಿವ ಮೂರ್ತಿ ಸೂಕ್ತ ಪೊಲೀಸ್ ಬಂದೊಬಸ್ತ್ ಕಲ್ಪಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!