ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಗಾಯಕಿ ಸಂಧ್ಯಾ ಮುಖ್ಯೋಪಾಧ್ಯಾಯ (90) ನಿಧನರಾಗಿದ್ದಾರೆ. ಬೆಂಗಾಲಿ ಗಾಯಕಿ ಸಂಧ್ಯಾ ಮುಖರ್ಜಿ ಹೃದಯ ಸ್ತಂಭನದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿತ್ತು. ಇದರಿಂದ ಗುಣಮುಖರಾದ ನಂತರ ಹೃದಯ ಕಾಯಿಲೆ, ಬಹು ಅಂಗಾಂಗಗಳ ವೈಫಲ್ಯ ಹಾಗೂ ಮೂಳೆ ಮುರಿತದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಮುಖರ್ಜಿ ಅವರು ಪದ್ಮಶ್ರೀ ನಿರಾಕರಿಸಿದ್ದರು. ಯುವ ಪೀಳಿಗೆಗೆ ಪ್ರಶಸ್ತಿಗಳನ್ನು ನೀಡಿ, ನಮಗೆ ಅಲ್ಲ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!