ಮದುವೆ ಎನ್ನುವುದು ಎರಡು ಮನಸ್ಸುಗಳ ಸಮ್ಮಿಲನ. ಮದುವೆ ನಂತರ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಜೀವನ ನರಕ. ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೆಂಡತಿ ಖುಷಿಯಾಗಿದ್ದರೆ ಎಲ್ಲವೂ ಆನಂದಮಯ. ಇವತ್ತು ನಿಮ್ಮ ಹೆಂಡತಿಯನ್ನು ಸಂತೋಷವಾಗಿರಿಸೋಕೆ ಕೆಲವು ಸಲಹೆಗಳನ್ನು ಕೊಡುತ್ತೇವೆ. ಇದರಿಂದ ನಿಮ್ಮ ಲೈಫ್ ಕೂಡ ಹ್ಯಾಪಿ ಆಗ್ಬಹುದು.
ಪ್ರೀತಿ ಮತ್ತು ಮೆಚ್ಚುಗೆ ಮಾತು
ಸಂತೋಷದ ವೈವಾಹಿಕ ಜೀವನವನ್ನು ಹೊಂದಲು ನಿಮ್ಮ ಹೆಂಡತಿಗೆ ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು. ಹೆಂಡತಿಯ ಬಗ್ಗೆ ಆಕೆಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ.
ಸ್ನೇಹವನ್ನು ಬೆಳೆಸಿಕೊಳ್ಳಿ
ಗಂಡ ಹೆಂಡತಿ ಜೀವನದುದ್ದಕ್ಕೂ ಸ್ನೇಹಿತರಾಗಿರಿ, ಬದಲಾಗಿ ಬರೀ ಗಂಡ ಅಥವಾ ಹೆಂಡತಿ ತರ ಇರಬೇಡಿ. ಗಂಡ ಮತ್ತು ಹೆಂಡತಿಯನ್ನು ಸ್ನೇಹಿತರೆಂದು ಪರಿಗಣಿಸಲಾಗುತ್ತದೆ.
ಸಾಮರಸ್ಯ
ನಮ್ಮ ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ ಮತ್ತು ಎಲ್ಲರೂ ಒಂದೇ ದೃಷ್ಟಿಕೋನವನ್ನು ಹೊಂದಿರುವುದಿಲ್ಲ. ಆದರೆ ಯಾರಿಗೂ ಕಿಂಚಿತ್ತೂ ನೋವಾಗದಿರುವಂತೆ ನಡೆದುಕೊಳ್ಳುವುದು. ಪರಸ್ಪರ ಅರ್ಥಮಾಡಿಕೊಳ್ಳುವುದು ಮುಖ್ಯ.
ಹೆಂಡತಿಯ ಕುಟುಂಬವನ್ನು ಗೌರವಿಸಿ
ನಿಮ್ಮ ಹೆಂಡತಿಯೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಿ, ನಿಮ್ಮ ಹೆತ್ತವರರಂತೆ ಹೆಂಡತಿಯ ಹೆತ್ತವರನ್ನು ಗೌರವಿಸಿ. ನಿಮ್ಮ ಸಂಗಾತಿಯೊಂದಿಗೆ ವ್ಯವಹರಿಸುವಾಗ, ಒಳ್ಳೆಯದು ಅಥವಾ ಕೆಟ್ಟದು, ಸರಿ ಅಥವಾ ತಪ್ಪನ್ನು ನೋಡುವುದು ಸರಿಯಲ್ಲ.