ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದಿಂದ 2025ನೇ ಸಾಲಿನಲ್ಲಿ ಸರ್ಕಾರಿ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಷ್ಟು ಎನ್ನುವ ಪಟ್ಟಿ ಮುಂದಿದೆ ಓದಿ.

ಈ ಕುರಿತಂತೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಅದರಲ್ಲಿ ಭಾರತ ಸರ್ಕಾರದ ಒಳಡಳಿತ ವ್ಯವಹಾರಗಳ ಇಲಾಖೆಯ ದಿನಾಂಕ:15.06.1957ರ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ನೆಗೋಷಿಯಬಲ್ ಇನ್ನುಮೆಂಟ್ ಆಕ್ಟ್ 1881ರ (1881ರ ಅಧಿನಿಯಮ ಸಂಖ್ಯೆ:26) 25ನೇ ಸೆಕ್ಷನ್ ನಲ್ಲಿರುವ ವಿವರಣೆಯಂತೆ 2024ನೇ ವರ್ಷದಲ್ಲಿ ಈ ಕೆಳಗಿನ ದಿನಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸಾರ್ವತ್ರಿಕ ರಜೆಗಳೆಂದು ಘೋಷಿಸಲಾಗಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ಎಂದಿದೆ.

ವರ್ಷಕ್ಕೆ ಒಟ್ಟು 19 ಸಾರ್ವಜನಿಕ ರಜಾದಿನಗಳು ಮತ್ತು 20 ಐಚ್ಛಿಕ ರಜಾದಿನಗಳನ್ನು ನಿಗದಿಪಡಿಸಲಾಗಿದೆ.ಈ ದಿನಾಂಕಗಳು ಭಾರತದ ಅನೇಕ ಪ್ರಮುಖ ಹಬ್ಬಗಳು ಮತ್ತು ರಾಷ್ಟ್ರೀಯ ಆಚರಣೆಗಳನ್ನು ಒಳಗೊಂಡಿವೆ, ಇದು ವಿಶ್ರಾಂತಿ ಮತ್ತು ಉತ್ಸವಗಳಿಗೆ ಸಾಕಷ್ಟು ಅವಕಾಶವನ್ನು ಖಾತ್ರಿಪಡಿಸುತ್ತದೆ.

ಜನವರಿ 14 ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಫೆಬ್ರವರಿ 26 ಮಹಾ ಶಿವರಾತ್ರಿ
ಮಾರ್ಚ್ 31 ಖುತುಬ್-ಎ-ರಂಜಾನ್
ಏಪ್ರಿಲ್ 5: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
ಏಪ್ರಿಲ್ 10 ಮಹಾವೀರ ಜಯಂತಿ
ಏಪ್ರಿಲ್ 18 ಗುಡ್ ಫ್ರೈಡೆ
ಏಪ್ರಿಲ್ 30 ಬಸವ ಜಯಂತಿ, ಅಕ್ಷಯ ತೃತೀಯ
ಮೇ 1 ಕಾರ್ಮಿಕ ದಿನ
ಜೂನ್ 7 ಬಕ್ರೀದ್
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 27 ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 5 ಈದ್ ಮಿಲಾದ್
ಅಕ್ಟೋಬರ್ 1 ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
ಅಕ್ಟೋಬರ್ 2 ಗಾಂಧಿ ಜಯಂತಿ
ಅಕ್ಟೋಬರ್ 7 ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 20 ನರಕ ಚತುರ್ದಶಿ
ಅಕ್ಟೋಬರ್ 22 ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 1 ಕನ್ನಡ ರಾಜ್ಯೋತ್ಸವ
ಡಿಸೆಂಬರ್ 25 ಕ್ರಿಸ್ಮಸ್

ನಿರ್ಬಂಧಿತ ರಜಾದಿನಗಳ ಪಟ್ಟಿ (2025)
ಜನವರಿ 1 ಹೊಸ ವರ್ಷ
ಫೆಬ್ರವರಿ 6 ಮಧ್ವ ನವಮಿ
ಫೆಬ್ರವರಿ 14 ಶಬ್-ಎ-ಬರಾತ್
ಮಾರ್ಚ್ 13 ಹೋಳಿ
ಮಾರ್ಚ್ 27 ಶಬ್-ಎ-ಖದರ್
ಮಾರ್ಚ್ 28 ಜುಮತ್-ಉಲ್-ವಿದಾ
ಏಪ್ರಿಲ್ 2 ದೇವರ ದಾಸಿಮಯ್ಯ ಜಯಂತಿ
ಏಪ್ರಿಲ್ 19 ಪವಿತ್ರ ಶನಿವಾರ
ಮೇ 2 ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ
ಮೇ 12 ಬುದ್ಧ ಪೂರ್ಣಿಮಾ
ಆಗಸ್ಟ್ 8 ಶ್ರೀ ವರಮಹಾಲಕ್ಷ್ಮಿ ವ್ರತ
ಆಗಸ್ಟ್ 16 ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 26 ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 6 ಶ್ರೀ ಅನಂತಪದ್ಮನಾಭ ವ್ರತ
ಸೆಪ್ಟೆಂಬರ್ 8 ಕನ್ಯಾ ಮರಿಯಮ್ಮ ಜಯಂತಿ
ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ
ಅಕ್ಟೋಬರ್ 18 ತುಲಾ ಸಂಕ್ರಮಣ
ನವೆಂಬರ್ 5 ಗುರುನಾನಕ್ ಜಯಂತಿ
ಡಿಸೆಂಬರ್ 5 ಉತಾರಿ ಉತ್ಸವ
ಡಿಸೆಂಬರ್ 24 ಕ್ರಿಸ್ಮಸ್ ಈವ್

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!