Sunday, December 10, 2023

Latest Posts

I.N.D.I.A ಕೂಟ ಅಧಿಕಾರಕ್ಕೆ ಬಂದರೆ ಮತ್ತೆ ಜಾತಿ ಗಣತಿ ವರದಿ ಬಿಡುಗಡೆ: ರಾಹುಲ್​ ಗಾಂಧಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

I.N.D.I.A ಕೂಟ ಅಧಿಕಾರಕ್ಕೆ ಬಂದರೆ, ಜಾತಿ ಗಣತಿಯನ್ನು ಮಾಡಿಸಿ, ಅದರ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಘೋಷಣೆ ಮಾಡಿದ್ದಾರೆ.

ಛತ್ತೀಸ್​​ಗಢದ ಬಿಲಾಸ್​ಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಆವಾಸ್ ನ್ಯಾಯ ಸಮ್ಮೇಳನ’ದಲ್ಲಿ ಮಾತನಾಡಿದ ರಾಹುಲ್, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಈ ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ನಡೆದ ಜಾತಿ ಗಣತಿ ವರದಿಯನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿಯನ್ನು ಮತ್ತೆ ನಡೆಸಿ, ಅದರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಿಮೋಟ್​ ಒತ್ತಿದರೆ, ಸಿರಿವಂತ ಉದ್ಯಮಿಗಳು, ಅದಾನಿಗೆ ವಿಮಾನ ನಿಲ್ದಾಣ, ಬಂದರು, ದೊಡ್ಡ ಯೋಜನೆಗಳಿಗೆ ಗುತ್ತಿಗೆ ಸಿಗುತ್ತದೆ. ಅದೇ ನಮ್ಮ ಪಕ್ಷ ಬಡವರ ಕಲ್ಯಾಣಕ್ಕಾಗಿ ಮಾತ್ರ ದುಡಿಯುತ್ತದೆ ಎಂದು ಹೇಳಿದರು.

ಈಗಿನ ಸರ್ಕಾರವನ್ನು ಸಚಿವ ಸಂಪುಟ ಕಾರ್ಯದರ್ಶಿಗಳು, ಇತರ ಕಾರ್ಯದರ್ಶಿಗಳು ನಡೆಸುತ್ತಾರೆ. ಆದರೆ, ನಿಜವಾಗಿಯೂ ಸರ್ಕಾರದ ಭಾಗವಾಗಿರಬೇಕಾದವರು ಸಂಸದರು ಮತ್ತು ಸಚಿವರು. ಆದರೆ, ಇಲ್ಲಿ ಹಾಗಿಲ್ಲ. ಕೇಂದ್ರ ಸಚಿವಾಲಯಗಳಲ್ಲಿನ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಹಿಂದುಳಿದ ವರ್ಗದವರಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಕೇವಲ 5 ಪ್ರತಿಶತವನ್ನು ಮಾತ್ರ ಅವರು ಪ್ರತಿನಿಧಿಸುತ್ತಾರೆ. ಇಡೀ ದೇಶದಲ್ಲಿ ಕೇವಲ ಐದು ಪ್ರತಿಶತದಷ್ಟು ಮಾತ್ರ ಒಬಿಸಿಗಳು ಇದ್ದಾರೆಯೇ ಎಂದು ರಾಹುಲ್​ ಪ್ರಶ್ನಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!