ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್‌ನ ಘಟಕವಾದ ಜಿಯೋ ಸ್ಟುಡಿಯೋಸ್ ‘ಆಪರೇಷನ್ ಸಿಂದೂರ್’ ಕುರಿತಾಗಿ ಸಲ್ಲಿಸಿದ್ದ ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂಪಡೆದಿದೆ. ಜೊತೆಗೆ ಈ ಬೆಳವಣಿಗೆ ಬಗ್ಗೆ ಸ್ಪಷ್ಟನೆಯನ್ನೂ ನೀಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಸ್ಥೆ, ಇದು ಕಂಪನಿಯ ಕಿರಿಯ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬರು ಅನುಮತಿಯಿಲ್ಲದೆ, ಅಜಾಗರೂಕತೆಯಿಂದ ಸಲ್ಲಿಸಿದ ಅರ್ಜಿಯಾಗಿದ್ದು, ಭಾರತೀಯರ ಶೌರ್ಯದ ಸಂಕೇತ, ರಾಷ್ಟ್ರೀಯ ಪ್ರಜ್ಞೆಯ ಭಾಗವಾದ ‘ಆಪರೇಷನ್ ಸಿಂದೂರ್’ನ್ನು ಟ್ರೇಡ್‌ಮಾರ್ಕ್ ಮಾಡುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ ಎಂದು ಹೇಳಿದೆ.
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂದೂರ್ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಎಲ್ಲ ಪಾಲುದಾರರು ಬಹಳ ಹೆಮ್ಮೆಪಡುತ್ತಾರೆ. ಭಯೋತ್ಪಾದನೆಯ ಹೀನಕೃತ್ಯದ ವಿರುದ್ಧ ಭಾರತದ ರಾಜಿ ಆಗದ ಹೋರಾಟದಲ್ಲಿ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಹೆಮ್ಮೆಯ ಸಾಧನೆ ಆಪರೇಷನ್ ಸಿಂಧೂರ್ ಆಗಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ರಿಲಯನ್ಸ್ ಸಮೂಹವು ನಮ್ಮ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಱಭಾರತ ಮೊದಲುೞ ಎಂಬ ಧ್ಯೇಯವಾಕ್ಯಕ್ಕೆ ನಮ್ಮ ಬದ್ಧತೆ ಅಚಲವಾಗಿದೆ ಎಂದು ಸಂಸ್ಥೆ ಹೇಳಿದೆ.