ಅಮೆರಿಕದ ಸೋಲಾರ್ ಸಾಫ್ಟ್ವೇರ್ ಕಂಪನಿ ರಿಲಾಯನ್ಸ್ ತೆಕ್ಕೆಗೆ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕ್ಯಾಲಿಫೋರ್ನಿಯಾ ಮೂಲದ ಸೆನ್ಸ್ ಹಾಕ್ ಎಂಬ ನವೋದ್ದಿಮೆಯ ಹೆಚ್ಚಿನ ಪಾಲನ್ನು ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರಿ 32 ಮಿಲಿಯನ್ ಡಾಲರುಗಳಿಗೆ ಕೊಂಡುಕೊಂಡಿದೆ. 

ಈ ಸೆನ್ಸ್ ಹಾಕ್ ಎಂಬುದು ಸೌರವಿದ್ಯುತ್ ಘಟಕಗಳ ಕಾರ್ಯನಿರ್ವಹಣೆಗೆ ಪೂರಕವಾಗಿ ತಂತ್ರಾಂಶವನ್ನು ಸಿದ್ಧಪಡಿಸುವ ಕಂಪನಿ. ಈ ಕಂಪನಿ ಅಭಿವೃದ್ಧಿಪಡಿಸುತ್ತಿರುವ ತಂತ್ರಾಂಶವು ಸೌರ ವಿದ್ಯುತ್ ದರವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಹಾಗೂ ಯಾಂತ್ರೀಕರಣದ ಸಮರ್ಪಕ ಅಳವಡಿಕೆ ಮೂಲಕ ಉತ್ಪಾದಕತೆ ಹೆಚ್ಚುವುದಕ್ಕೆ ಹಾಗೂ ಸೌರ ವಿದ್ಯುತ್ ಬಳಕೆಯ ಕ್ಷಮತೆ ಹೆಚ್ಚುವಂತೆ ಮಾಡುತ್ತದೆ ಎಂದು ರಿಲಾಯನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

203ರ ವೇಳೆಗೆ 100 ಗಿಗಾವ್ಯಾಟ್ ಸೌರಶಕ್ತಿ ಉತ್ಪಾದನೆ ಮಾಡುವ ಮೂಲಕ ಹಸಿರು ಇಂಧನ ಬಳಕೆಗೆ ದೊಡ್ಡಮಟ್ಟದ ಸಹಯೋಗ ನೀಡಬೇಕು ಎಂಬ ನಿಟ್ಟಿನಲ್ಲಿ ರಿಲಾಯನ್ಸ್ ಕೆಲಸ ಮಾಡುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!