ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವೈರಲ್‌ ಆಡಿಯೋ ಕುರಿತು ಸೂಕ್ತ ಕ್ರಮಕ್ಕೆ ಆಗ್ರಹ

ಹೊಸದಿಗಂತ ವರದಿ, ಬೀದರ್
ವಾಟ್ಸಪ್‌ನಲ್ಲಿ ಮಹಿಳೆಯರಿಬ್ಬರ ಧ್ವನಿ ರೇಕಾರ್ಡಿಂಗ್ ವೈರಲ್‌ ಆಗಿದ್ದರಿಂದ ಬೆಳಗಾವಿಯ ಬೈಲಹೊಂಗಲದ ನೇಗಿನಹಾಳ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಕಾರ್ಯಪ್ರವತ್ತರಾಗಿ ಆರೋಪಿ ಮಹಿಳೆಯರನ್ನು ಬಂಧಿಸಿ ಅವರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ವೀರಭದ್ರ ಸೇನೆ ಆಗ್ರಹಿಸಿದೆ.
ಸೇನೆಯ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಕರಂಜಿ ಮಾತನಾಡಿ, ಈ ಘಟನೆಯಿಂದ ಅನೇಕ ಮಠಾಧೀಶರಿಗೆ ನೋವುಂಟಾಗಿದೆ. ಈ ವಿಚಾರದಲ್ಲಿ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ತ್ರಿವಿಧ ದಾಸೋಹ ಸೇವೆ ಮಾಡುತ್ತಿರುವ ಮಠಾಧೀಶರ ವಿರುದ್ಧ ಕಾಣದ ಕೈಗಳು ಶಡ್ಯಂತ್ರ ನಡೆಸಿವೆ ಎಂದು ಆರೋಪಿಸಿದರು.
ಪರಿಸ್ಥಿತಿ ಹಿಗೇಯೇ ಮುಂದುವರೆದರೆ ನಾಡಿನ ಮಠಾಧೀಶರು ರಿಂದ ನಡೆಯುತ್ತಿರುವ ಸಮಾಜ ಸೇವಾ ಕಾರ್ಯಗಳಿಗೆ ದಕ್ಕೆ ಆಗಲಿದೆ. ಈ ಹಿಂದೆ ರಮೇಶ ಜಾರಕಿಹೊಳಿ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಸರ್ಕಾರ ಸೂಕ್ತ ಕ್ರಮವಹಿಸದೆ ತನಿಖೆ ಹಳ್ಳಹಿಡಿದಿದೆ. ಸ್ವಾಮೀಜಿ ಪ್ರಕರಣದಲ್ಲಿ ಹೀಗಾಗಬಾರದು ಎಂದರು.
ಅಪರಿಚಿತ ಮಹಿಳೆಯರಿಬ್ಬರ ಆಡಿಯೋ ವೈರಲ್‌ ಆದ ಬಳಿಕ ಸ್ವ ಆಮಿಜಿ ಆತ್ಮಹತ್ಯರಗೆ ಶರಣಾಗಿದ್ದಾರೆ. ಆಡಿಯೊದಲ್ಲಿ  ಅನೇಕ ಮಠಾಧೀಶರ ಹೆಸರು ಪ್ರಸ್ತಾಪವಾಗಿರುವುದು ಸಮಾಜದಲ್ಲಿ ಅಶಾಂತಿ, ಅಭದ್ರತೆ ಸೃಷ್ಟಿಸುವ ಹುನ್ನಾರವಾಗಿದೆ.ಪ್ರಕರಣದ ಸತ್ಯಾಸತ್ಯೆತೆಯನ್ನು ಹೊರತಂದು ಸ್ವಾಮಿಜಿಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.
ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾಜಶೇಖರ ನಾಗಮೂರ್ತಿ ಮಾತನಾಡಿ, ಸ್ವಾಮಿಜಿಗಳು ಈ ರೀತಿಯ ಬೆದರಿಕೆಗಳಿಗೆ ಹೆದರುವ ಅಗತ್ಯವಿಲ್ಲ. ಆಡಿಯೋ ವಿಚಾರದ ಸೂಕ್ತ ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!