ತಮಿಳುನಾಡಿನ ಶ್ರೀರಂಗಂ ದೇಗುಲದಿಂದ ಮಂತ್ರಾಲಯಕ್ಕೆ ಶೇಷವಸ್ತ್ರ ಸಮರ್ಪಣೆ

ಹೊಸದಿಗಂತ ವರದಿ, ರಾಯಚೂರು :

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ೩೫೩ ನೇ ಪೂರ್ವಾರಾಧನಾ ಮಹೋತ್ಸವಕ್ಕೆ ತಮಿಳುನಾಡಿನ ಶ್ರೀರಂಗಂ ದೇವಸ್ಥಾನದಿಂದ ಬಂದಿರುವ ಶೇಷವಸ್ತ್ರಗಳನ್ನು ರಾಯರಿಗೆ ಸಮರ್ಪಣೆ ಮಾಡಲಾಯಿತು.

ಮಂಗಳವಾರ ಶ್ರೀಗುರುರಾಯರ ಪೂರ್ವಾರಾಧನೆ ಅಂಗವಾಗಿ ಬೆಳಿಗ್ಗೆ ನಿರ್ಮಲ್ಯ ವಿಸರ್ಜನೆ, ಶ್ರೀಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕ ಕಾರ್ಯಕ್ರಮಗಳ ಜರುಗಿದವು. ತುಮಿಳುನಾಡಿನ ಶ್ರೀರಂಗ ದೇವಸ್ಥಾನದ ಪ್ರಧಾನ ಅರ್ಚಕ ಸುಂದರಂ ಭಟ್ಟಾಚಾರ್ ತಂದಿದ್ದ ಶೇಷವಸ್ತ್ರಗಳನ್ನು ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸ್ವೀಕರಿಸಿದರು.

ನಂತರ ಮೆರವಣಿಗೆ ಮೂಲಕ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ತರಲಾಯಿತು. ನಂತರ ಶ್ರೀರಾಘವೇಂದ್ರ ಸ್ವಾಮಿಗಳವರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಬ್ರಹ್ಮಕರಾಚಿತ ಶ್ರೀಮೂಲರಾಮದೇವ ಪೂಜೆ, ಅಲಂಕಾರ ಸಮರ್ಪಣಾ ಸೇವೆ ನೆರವೇರಿಸಿದರು.

ಬಳಿಕ ಮೂಲಬೃಂದಾವನಕ್ಕೆ ಪಂಚಾಮೃತಾಭಿಷೇಕ ಹಸ್ತೋದಕ ಸಮರ್ಪಣೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾನದ ಮಂಟಪಕ್ಕೆ ಸುವರ್ಣ ಕವಚ ನಿರ್ಮಾಣ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಮಂಗಳವಾರ ಬೃಂದಾವನದ ಸುವರ್ಣ ಹೊಸ್ತಲು ಸಮರ್ಪಿಸಲಾಯಿತು.

ಶ್ರೀಮಠದ ಉತ್ಸವ ಮಂಟಪದಲ್ಲಿ ವಿವಿಧ ಪಂಡಿತರಿoದ ಪ್ರವಚನ ಕಾರ್ಯಕ್ರಮ ನಡೆದವು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಪೂರ್ವಾರಾಧನೆ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಗಳಿಂದ ರಾಯರ ಭಕ್ತರು ಆಗಮಿಸಿರುವರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!