May 29, 2026
Friday, May 29, 2026
spot_img

ಕುಸ್ತಿಪಟು ವಿನೇಶ್ ಫೋಗಟ್​ಗೆ ರಿಲೀಫ್: ಏಷ್ಯನ್ ಗೇಮ್ಸ್​ ಟ್ರಯಲ್ಸ್ ನಲ್ಲಿ ಭಾಗವಹಿಸಲು ‘ಸುಪ್ರೀಂ’ ಗ್ರೀನ್ ಸಿಗ್ನಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕುಸ್ತಿಪಟು ವಿನೇಶ್ ಫೋಗಟ್​ಗೆ 2026ರ ಏಷ್ಯನ್ ಕ್ರೀಡಾಕೂಟದ​​ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂಕೊರ್ಟ್​ ಅವಕಾಶ ನೀಡಿದೆ.

ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂಕೊರ್ಟ್

ಫೋಗಟ್​ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ ಸುಪ್ರೀಂ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಹಸ್ತಕ್ಷೇಪ ಮಾಡಲು ನಿರಾಕರಿಸಿತು.

ದೇಶಕ್ಕೆ ಕೀರ್ತಿ ತಂದ ಫೋಗಟ್

ಒಂದು ವೇಳೆ ಆ ಜಾಗದಲ್ಲಿ ಬೇರೆ ಯಾರಾದರೂ ಆಗಿದ್ದರೆ, ಬೇರೆ ಸಂಗತಿ ನಡೆಯುತ್ತಿತ್ತು. ಆದರೆ ವಿನೇಶ್ ಫೋಗಟ್ ಕುಸ್ತಿಯಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೀಗಾಗಿ ಹೈಕೋರ್ಟ್​ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ.

ಇದೇ ವೇಳೆ ತಾಯ್ತನ ಮತ್ತು ಲಿಂಗ ತಾರತಮ್ಯ ವಿಚಾರದಲ್ಲಿ ಹೈಕೋರ್ಟ್ ಮಾಡಿದ ಕೆಲವು ಅವಲೋಕನಗಳಿಗೆ ಸುಪ್ರೀಂ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ
ಕ್ರೀಡಾ ಆಡಳಿತದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಆಧಾರವಾಗುವುದಿಲ್ಲ. ಕ್ರೀಡಾಪಟುಗಳು ಎಲ್ಲಾ ಅರ್ಹತೆ ಮತ್ತು ಅನುಸರಣೆ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !