ಅರವಿಂದ್ ಕೇಜ್ರಿವಾಲ್ ಗೆ ರಿಲೀಫ್: ಗೋವಾ ಕೋರ್ಟ್ ನಿಂದ ಎಫ್‌ಐಆರ್ ತಿರಸ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ರಿಲೀಫ್ ಸಿಕ್ಕಿದೆ. ಗೋವಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ಗೋವಾ ಕೋರ್ಟ್ ತಿರಸ್ಕರಿಸಿದೆ.

2017ರಲ್ಲಿ ಗೋವಾ ಚುನಾವಣಾ ಪ್ರಚಾರದ ವೇಳೆ, ಸಾರ್ವಜನಿಕ ಸಭೆಯೊಂದರಲ್ಲಿ ಕೇಜ್ರಿವಾಲ್ , ಎಲ್ಲರಿಂದ ಹಣ ತೆಗೆದುಕೊಳ್ಳಿ, ಆದರೆ ಪೊರಕೆಗೆ ಮತ ಹಾಕುವಂತೆ ಸಲಹೆ ನೀಡಿದ್ದರು. ಆಗ ಅವರ ಹೇಳಿಕೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಭಾಷಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಪ್ರಜಾಪ್ರತಿನಿಧಿ ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 171 (ಇ) ಅಡಿಯಲ್ಲಿ ಲಂಚದ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕಳೆದ ನವೆಂಬರ್‌ನಲ್ಲಿ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದರು. ಎಎಪಿ 2017 ಮತ್ತು 2022 ರಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ 2017 ರಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು. 2022 ರಲ್ಲಿ ಎರಡು ಸ್ಥಾನಗಳನ್ನು ಗೆದ್ದಿತ್ತು. ಈ ಪ್ರಕರಣದ ವಿಚಾರಣೆ ಸುಮಾರು 7 ವರ್ಷ ನಡೆದಿದ್ದು, ಕೊನೆಗೆ ಶನಿವಾರದಂದು ತೀರ್ಪು ಪ್ರಕಟಿಸುವ ಮೂಲಕ ಎಫ್ ಐಆರ್ ತಿರಸ್ಕೃತಗೊಂಡಿದೆ.

ಅರವಿಂದ್ ಕೇಜ್ರಿವಾಲ್ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!