ಮೈತ್ರಿಯಿಂದ ರಾಜ್ಯದಲ್ಲಿ ಎರಡು ಪಕ್ಷಗಳಿಗೆ ಶಕ್ತಿ: ಪ್ರಹ್ಲಾದ್ ಜೋಶಿ

 ಹೊಸದಿಗಂತ ವರದಿ,ಹುಬ್ಬಳ್ಳಿ:

ಲೋಕಸಭಾ ಚುನಾವನೆಯಲ್ಲಿ ಎನ್‌ಡಿಎ ಅತೀ ಹೆಚ್ಚು ಸ್ಥಾನಗಳ ಗೆಲ್ಲುವ ಮೂಲಕ ಸಾಧನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಶನಿವಾರ ಇಲ್ಲಿಯ ಜೆ.ಸಿ. ನಗರದ ನೌಕರರ ಭವನದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಬಿಜೆಪಿ ಜೆಡಿಎಸ್ ಹು-ಧಾ ಪೂರ್ವ ವಿಧಾನ ಸಭಾ ಕ್ಷೇತ್ರದ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೈತ್ರಿಯಿಂದ ರಾಜ್ಯದಲ್ಲಿ ಎರಡು ಪಕ್ಷಗಳಿಗೆ ಶಕ್ತಿ ಬಂದಿದೆ. ಧಾರವಾಡ ಲೋಕಸಭಾದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಲು ಮೈತ್ರಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಹು-ಧಾ ಪೂರ್ವ ಕ್ಷೇತ್ರದಲ್ಲಿ ಹೆಚ್ಚು ಮತದಾರರ ಸಂಪರ್ಕ ಮಾಡಬೇಕು ಎಂದರು.

ಜೆಡಿಎಸ್ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಮೈತ್ರಿ ಪಕ್ಷಗಳು ಎಲ್ಲ ಸಮುದಾಯದ ರಕ್ಷಣೆಗೆ ಮಾಡುತ್ತಿವೆ. ರಾಜ್ಯದಲ್ಲಿರು ಜಲ್ವಂತ ಸಮಸ್ಯೆಗಳ ಪರಿಹರಿಸಲು ನಮ್ಮ ವರಿಷ್ಠರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!