#RememberingSPB – ಹಾಡುಗಾರನಾಗುವ ಆಸೆ ಇರಲಿಲ್ಲ, ಸರ್ಕಾರಿ ನೌಕರಿ ಬೇಕಿತ್ತಷ್ಟೇ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಸ್.ಪಿ. ಬಾಲಸುಬ್ರಮಣ್ಯಂನಂಥ ಗಾಯಕರು ಸಣ್ಣ ವಯಸ್ಸಿನಿಂದಲೇ ಹಾಡುತ್ತಿರಬಹುದು, ಮಗುವಾಗಿದ್ದಾಗಲೇ ರಾಗ ತೆಗೆದಿರಬಹುದು ಎಂದೆಲ್ಲಾ ಅನಿಸುವುದು ಸಹಜ. ಆದರೆ ಎಸ್‌ಪಿಬಿ ತನ್ನ ಕಾಲೇಜು ದಿನಗಳವರೆಗೂ ಎಲ್ಲಿಯೂ ಹಾಡುತ್ತಿರಲಿಲ್ಲವಂತೆ.
ಕಾಲೇಜಿನಲ್ಲಿದ್ದ ಎಷ್ಟೋ ಸ್ನೇಹಿತರಿಗೆ ಎಸ್‌ಪಿಬಿ ಹಾಡುಗಾರಿಕೆ ಹೇಗಿದೆ ಅನ್ನೋದೇ ತಿಳಿದಿರಲಿಲ್ಲವಂತೆ.

ಈ ಬಗ್ಗೆ ಒಂದು ಸಂದರ್ಶನದಲ್ಲಿ ಎಸ್‌ಪಿ ಶೈಲಜಾ ಅವರು ಮಾತನಾಡಿದ್ದು, ನಾನು ಹಾಗೂ ಬಾಲಸುಬ್ರಮಣ್ಯಂ ಹೊರತುಪಡಿಸಿ ಮನೆಯಲ್ಲಿ ಇನ್ನೆಲ್ಲರಿಗೂ ಸಂಗೀತದ ಜ್ಞಾನ ಇದೆ. ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಬಾಲುಗೆ ಎಂದಿಗೂ ಸಿಂಗರ್ ಆಗುವ ಆಸೆ ಇರಲೇ ಇಲ್ಲ. ಅವರಿಗೆ ಅಪ್ಪನ ಆಸೆಯಂತೆ ಎಂಜನಿಯರಿಂಗ್ ಮುಗಿಸಿ ಒಂದೊಳ್ಳೆ ಸರ್ಕಾರಿ ನೌಕರಿ ಪಡೆಯಬೇಕು ಎಂದಿತ್ತು. ಅನಾರೋಗ್ಯ ಕಾರಣದಿಂದ ಕಾಲೇಜಿನಿಂದ ಬಾಲು ಹೊರಬಿದ್ದ. ಅಪ್ಪನ ಆಸೆ ಈಡೇರಿಸಲು ಆಗಲಿಲ್ಲ.ಆದರೆ ಅಪ್ಪ ಊಹಿಸಲಾರದಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎಂದು ಹೇಳಿದ್ದರು.

ಹೀಗೆ ಒಂದು ಸ್ಪರ್ಧೆಯಲ್ಲಿ ಬಾಲಸುಬ್ರಮಣ್ಯಂ ಅವರು ಹಾಡಿ ಎರಡನೇ ಬಹುಮಾನ ಪಡೆದಿದ್ದರಂತೆ, ಇಲ್ಲಿ ತೀರ್ಪುಗಾರರಾಗಿ ಬಂದಿದ್ದು, ಎಸ್. ಜಾನಕಿಯವರು.
ಸ್ಪರ್ಧೆ ಮುಗಿದ ಮೇಲೆ ಎಸ್‌ಪಿಬಿ ಅವರ ಬಳಿ ಬಂದು, ಮೊದಲನೇ ಬಹುಮಾನ ಪಡೆದವನಿಗಿಂತ ನೀನೇ ಚೆನ್ನಾಗಿ ಹಾಡಿದೆ, ಸಿನಿಮಾಗಳಲ್ಲಿ ನೀನೇಕೆ ಹಾಡಬಾರದು ಎಂದು ಕೇಳಿದ್ದರಂತೆ. ಅದಕ್ಕೆ ಎಸ್‌ಪಿಬಿ ವರು ನಾನು ಸಂಗೀತದ ಸ ಕೂಡ ಕಲಿತಿಲ್ಲ, ಸಿನಿಮಾದಲ್ಲಿ ಹೇಗೆ ಹಾಡಲು ಸಾಧ್ಯ ಎಂದು ನಕ್ಕು ಹೋಗಿದ್ದರಂತೆ.

ಯಾರಿಗೆ ತಿಳಿದಿತ್ತು, ಅಂದು ಎರಡನೇ ಬಹುಮಾನ ಪಡೆದ ಯುವಕ ಇಂದು ಲೆಜೆಂಡರಿ ಗಾಯಕರಾಗುತ್ತಾರೆ ಎಂದು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!